ಬೆಂಗಳೂರು: ಲೋಕಸಭಾ 2024ರ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಅದು 2014ರ ಫಲಿತಾಂಶದಂತೆಯೇ ಇದೆ. ಆದರೆ ಕ್ಷೇತ್ರದಲ್ಲಿ ಮಾತ್ರ ಬದಲಾವಣೆಯಾಗಿದೆ.
2014ರಲ್ಲಿಯೂ 2024ರಂತೆಯೇ ಬಿಜೆಪಿ 17 ಸ್ಥಾನ, ರಾಷ್ಟ್ರೀಯ ಕಾಂಗ್ರೆಸ್ 9 ಸ್ಥಾನ ಮತ್ತು ಜೆಡಿಎಸ್ 2 ಸ್ಥಾನವನ್ನುಗಳಿಸಿಕೊಂಡಿತ್ತು. ಕ್ಷೇತ್ರಗಳು ಮಾತ್ರ ಬೇರೆ ಬೇರೆಯಾಗಿತ್ತು.
2014ರಲ್ಲಿ ಚಿಕ್ಕೋಡಿ, ಕಲಬುರಗಿ, ರಾಯಚೂರು,ಚಿತ್ರದುರ್ಗ, ತುಮಕೂರು, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಸ್ಥಾನ ಗಿಟ್ಟಿಸಿಕೊಂಡು ಇನ್ನು ಉಳಿದ 17 ಸ್ಥಾನಗಳಲ್ಲಿ ಬಿಜೆಪಿ ಮೋದಿ ಅಲೆಯನ್ನು ತೋರ್ಪಡಿಸಿತ್ತು.
2024ರಲ್ಲಿ ಚಿಕ್ಕೋಡಿ, ಕಲಬುರಗಿ, ರಾಯಚೂರು, ಚಾಮರಾಜನಗರ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಬೀದರ್, ಹಾಸನದಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್ ಗೆಲುವು ಗಳಿಸಿದ್ದು, ಮಿಕ್ಕ 17 ಸ್ಥಾನದಲ್ಲಿ ಬಿಜೆಪಿ ತನ್ನ ಅಲೆಯನ್ನು ಉಳಿಸಿಕೊಂಡಿದೆ. 2014ರಲ್ಲಿ ಯಾವುದೇ ಮೈತ್ರಿ ಮಾಡಿಕೊಂಡಿರಲಿಲ್ಲ. ಆದರೆ 2024ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮೂಲಕ ಲೋಕಸಭಾ ಚುನಾವಣೆ ನಡೆಸಿದೆ ಎಂಬುದಷ್ಟೇ ವ್ಯತ್ಯಾಸ.