ಗಾಂಧಿನಗರ(ಗುಜರಾತ್): 2008ರಲ್ಲಿ ಅಹಮದಾಬಾದ್ ನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ವಿಶೇಷ ನ್ಯಾಯಾಲಯ 77 ಆರೋಪಿಗಳಲ್ಲಿ 28 ಮಂದಿಯನ್ನು ಖುಲಾಸೆಗೊಳಿಸಿದ್ದು, 49 ಮಂದಿ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲೂ ಹಿಜಾಬ್- ಕೇಸರಿ ಶಾಲಿನದ್ದೇ ಚರ್ಚೆ
ಸರಣಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 77 ಆರೋಪಿಗಳ ವಿಚಾರಣೆ ಪೂರ್ಣಗೊಂಡಿತ್ತು. 2008ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.
ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ನಲ್ಲಿ 20 ಎಫ್ ಐಆರ್ ದಾಖಲಾಗಿತ್ತು. ಸೂರತ್ ನಲ್ಲಿ 15 ಎಫ್ ಐಆರ್ ದಾಖಲಾಗಿತ್ತು. 2002ರ ಗಲಭೆಗೆ ಪ್ರತಿಯಾಗಿ ಅಹಮದಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟಿಸಿರುವುದಾಗಿ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿತ್ತು.
ಪೊಲೀಸರ ಹೇಳಿಕೆ ಪ್ರಕಾರ, ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯರು ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿರುವುದಾಗಿ ತಿಳಿಸಿದ್ದಾರೆ.
ಸರಣಿ ಬಾಂಬ್ ಪ್ರಕರಣದಲ್ಲಿ ವಿಶೇಷ ಜಡ್ಜ್ ಎ.ಆರ್.ಪಟೇಲ್ ಮತ್ತು ಪ್ರಾಸಿಕ್ಯೂಷನ್ 1,100ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಇದರಲ್ಲಿ 26 ಸಾಕ್ಷಿಗಳನ್ನು ಪ್ರಮುಖ ಸಾಕ್ಷ್ಯದಾರರು ಎಂದು ಪರಿಗಣಿಸಲಾಗಿತ್ತು.