Advertisement

ಬೆಚ್ಚಿಬೀಳಿಸಿದ್ದ ಆ ಸ್ಫೋಟದ ಸುತ್ತ

01:49 AM Feb 19, 2022 | Team Udayavani |

2008ರ ಅಹ್ಮದಾಬಾದ್‌ ಸ್ಫೋಟ ಪ್ರಕರಣ ಸಂಬಂಧ 38 ಅಪರಾಧಿಗಳಿಗೆ ಗುಜರಾತ್‌ನ ವಿಶೇಷ ಕೋರ್ಟ್‌ ಗಲ್ಲು ಶಿಕ್ಷೆ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಏಕಕಾಲಕ್ಕೆ ಇಷ್ಟು ದೋಷಿಗಳಿಗೆ ಗಲ್ಲುಶಿಕ್ಷೆಯಾಗಿರುವುದು ಇತಿಹಾಸದಲ್ಲೇ ಮೊದಲು. ಪ್ರಕರಣದ ಹಿನ್ನೆಲೆ ಹೀಗಿದೆ.

Advertisement

ಬೆಂಗಳೂರು ಸ್ಫೋಟದ ಮಾರನೇ ದಿನ…
2008 ಜುಲೈ 26ರಂದು ಅಹ್ಮದಾಬಾದ್‌ನ 14 ಪ್ರದೇಶಗಳಲ್ಲಿ ಸುಮಾರು 21ರಷ್ಟು ಅಲ್ಪ ತೀವ್ರತೆಯ ಸರಣಿ ಸ್ಫೋಟಗಳನ್ನು ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಸ್ಫೋಟ ನಡೆದ ಮಾರನೇ ದಿನವೇ ಈ ವಿಧ್ವಂಸಕ ಕೃತ್ಯ ನಡೆದಿತ್ತು. ಅಹ್ಮದಾಬಾದ್‌ನಲ್ಲಿ ಸಂಜೆ 6.45ಕ್ಕೆ ಆರಂಭಗೊಂಡ ಸ್ಫೋಟವು ಸುಮಾರು 1 ಗಂಟೆ ಕಾಲ ಇಡೀ ನಗರವನ್ನೇ ನಡುಗಿಸಿಬಿಟ್ಟಿತ್ತು. ಸ್ಫೋಟದ ತೀವ್ರತೆಗೆ 56 ಮಂದಿ ಅಸುನೀಗಿದರೆ, 200 ಮಂದಿ ಗಾಯಗೊಂಡಿದ್ದರು.

ಕೇರಳದ ಅರಣ್ಯದಲ್ಲಿ ನಡೆದಿತ್ತು ಸಂಚು
2007ರ ಡಿಸೆಂಬರ್‌ನಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಸಿಮಿ ಸದಸ್ಯರು ತಮ್ಮ ತರಬೇತಿ ಶಿಬಿರದಲ್ಲೇ ಈ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಎರ್ನಾಕುಳಂನ ದಟ್ಟಾರಣ್ಯದಲ್ಲಿ ಸಿಮಿ ನಾಯಕ ಸಫಾªರ್‌ ನಗೋರಿ ಸಭೆ ನಡೆಸಿದ್ದ. ವಿವಿಧ ರಾಜ್ಯಗಳಿಂದ ಬಂದಿದ್ದ 50 ಮಂದಿಗೆ ಇದೇ ಅರಣ್ಯದಲ್ಲಿ ಶಸ್ತ್ರಾಸ್ತ್ರ ಬಳಕೆ ತರಬೇತಿ ನೀಡಲಾಗಿತ್ತು.

ಇಮೇಲ್‌ ಬೆದರಿಕೆ
ಸ್ಫೋಟ ಸಂಭವಿಸುವ ಕೇವಲ 5 ನಿಮಿಷ ಮುನ್ನ ಅಹ್ಮದಾಬಾದ್‌ನ ವಿವಿಧ ಮಾಧ್ಯಮ ಕಚೇರಿಗಳಿಗೆ ಇಮೇಲ್‌ ಸಂದೇಶವೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ ಸ್ಫೋಟದ ಮಾಹಿತಿಯಿತ್ತು.

ಎಲ್ಲೆಲ್ಲ ಸ್ಫೋಟ?
ಮಣಿನಗರ, ಅಹ್ಮದಾಬಾದ್‌ ಆಸ್ಪತ್ರೆ, ರಾಯು³ರ, ಬಾಪುನಗರ, ಹತೆRàಶ್ವರ್‌, ಸಖೇìಜ್‌, ಥಕ್ಕರ್‌ಬಾಪಾ ನಗರ್‌, ಖಾದಿಯಾ, ಸಾರಂಗ್‌ಪುರ, ಜವಾಹರ್‌ಚೌಕ್‌, ಇಸಾನ್ಪುರ, ಗೋವಿಂದವಾಡಿ, ನರೋಲ್‌.

Advertisement

ಹೊಣೆ ಹೊತ್ತ ಐಎಂ
ಸ್ಫೋಟದ ಬಳಿಕ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯು ಘಟನೆಯ ಹೊಣೆ ಹೊತ್ತಿತ್ತು. “2002ರ ಗುಜರಾತ್‌ ಗಲಭೆಗೆ ಪ್ರತೀಕಾರವಾಗಿ ಸ್ಫೋಟ ನಡೆಸಲಾಗಿದೆ’ ಎಂದಿತ್ತು.

35 ಎಫ್ಐಆರ್‌
ಅಹ್ಮದಾಬಾದ್‌ನಲ್ಲಿ 20ರಷ್ಟು ಎಫ್ಐಆರ್‌ಗಳನ್ನು ದಾಖಲಿಸಲಾಯಿತು. ಸ್ಫೋಟದ ಅನಂತರವೂ ಸೂರತ್‌ನ ಹಲವೆಡೆೆ ಬಾಂಬ್‌ ಪತ್ತೆಯಾಗುತ್ತಿದ್ದ ಹಿನ್ನೆಲೆ ಅಲ್ಲೂ 15 ಎಫ್ಐಆರ್‌ ದಾಖಲಾಯಿತು. 35 ಎಫ್ಐಆರ್‌ವಿಲೀನ ಗೊಳಿಸಿದ ಬಳಿಕ ಪ್ರಕರಣದ ವಿಚಾರಣೆ ಆರಂಭವಾ ಯಿತು. ಸ್ಫೋಟದ ಸಂಚಿನಲ್ಲಿ 100 ಸಿಮಿ ಕಾರ್ಯಕರ್ತ ರು ಭಾಗಿಯಾಗಿದ್ದರು ಎಂದು ಉಲ್ಲೇಖೀಸಲಾಯಿತು.

ಸುರಂಗ ಕೊರೆದು ಎಸ್ಕೇಪ್‌ ಆಗಲು ಪ್ಲ್ಯಾನ್!
ಸ್ಫೋಟದ ಮಾಸ್ಟರ್‌ ಮೈಂಡ್ ಮುಫ್ತಿ ಅಬ್ದುಲ್‌ ಬಶೀಲ್‌ ಇಸ್ಲಾಹಿ ಅನ್ನು 2008ರ ಆ.16ರಂದು ಬಂಧಿಸಲಾಯಿತು. ಅಂದಿನಿಂದ 49 ಆರೋಪಿಗಳಲ್ಲಿ ಒಬ್ಬರಿಗೂ ಜಾಮೀನು ಸಿಕ್ಕಿರಲಿಲ್ಲ. ಒಬ್ಬನನ್ನು ಮಾತ್ರ ಗಂಭೀರ ಕಾಯಿಲೆಯಿದ್ದ ಕಾರಣ ಬಿಡುಗಡೆ ಮಾಡಲಾಯಿತು. ಒಂದು ಹಂತದಲ್ಲಿ, 24 ಆರೋಪಿಗಳು ಜೈಲಿನಿಂದಲೇ 213 ಅಡಿ ಸುರಂಗ ಕೊರೆದು ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next