Advertisement

ನೇವಿ ವಾರ್‌ ರೂಮ್‌ ಲೀಕ್‌ : ನಿವೃತ್ತ ಕ್ಯಾಪ್ಟನ್‌ಗೆ 7 ವರ್ಷ ಜೈಲು

03:40 PM Jul 11, 2018 | udayavani editorial |

ಹೊಸದಿಲ್ಲಿ : 2005ರ ನೇವಿ ವಾರ್‌ ರೂಮ್‌ ಲೀಕ್‌ ಕೇಸ್‌ ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಇಂದು ಬುಧವಾರ ಕ್ಯಾಪ್ಟನ್‌ (ನಿವೃತ್ತ) ಸಲಾಂ ಸಿಂಗ್‌ ರಾಠೊಡ್‌ ಅವರಿಗೆ ಏಳು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. 

Advertisement

ಇದೇ ಪ್ರಕರಣದ ಇನ್ನೋರ್ವಆರೋಪಿಯಗಿರುವ ಕಮಾಂಡರ್‌ (ನಿವೃತ್ತ) ಜರ್ನೇಲ್‌ ಸಿಂಗ್‌ ಕಾರ್ಲಾ ಅವರನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ. 

ರಾಠೊಡ್‌ ಅವರು ರಾಷ್ಟ್ರ ಭದ್ರತೆ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ಹೇಳಿದ ನ್ಯಾಯಾಧೀಶರು ಅಧಿಕೃತ ರಹಸ್ಯಗಳ ಕಾಯಿದೆ 1923ರ ಪ್ರಕಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. 

2005ರ ಈ ಪ್ರಕರಣದಲ್ಲಿ ನೇವಲ್‌ ವಾರ್‌ ರೂಮ್‌ ಮತ್ತು ವಾಯು ರಕ್ಷಣಾ ಪ್ರಧಾನ ಕಾರ್ಯಾಲಯದಿಂದ ಸುಮಾರು 7,000 ಪುಟಗಳ ರಹಸ್ಯ ರಕ್ಷಣಾ ಮಾಹಿತಿಗಳನ್ನು  ಹಣಕ್ಕಾಗಿ ಅನಧಿಕೃತ ವ್ಯಕ್ತಿಗಳಿಗೆ ವರ್ಗಾಯಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next