Advertisement

ಶಿಕ್ಷೆ ವಿಧಿಸಿದರೂ ಸ್ಫೋಟದ ರೂವಾರಿಗೆ ಇಲ್ಲ ಸೆರೆವಾಸ!

03:45 AM Feb 17, 2017 | |

ನವದೆಹಲಿ: 12 ವರ್ಷ ಹಿಂದೆ ದೆಹಲಿಯಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಅದರ ರೂವಾರಿ ತಾರೀಕ್‌ ಅಹ್ಮದ್‌ ದರ್‌ ಎಂಬಾತನಿಗೆ 10 ವರ್ಷ ಕಠಿಣ ಶಿಕ್ಷೆ ನೀಡಲಾಗಿದೆ. ಆದರೆ ಈಗಾಗಲೇ 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಆತ ಶೀಘ್ರದಲ್ಲೇ ಕಾರಾಗೃಹದಿಂದ ಹೊರಗೆ ಬರಲಿದ್ದಾನೆ. 

Advertisement

ಕಾನೂನು ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಆರೋಪ ಸಾಬೀತಾದರೆ ಗರಿಷ್ಠವೆಂದರೆ 10 ವರ್ಷ ಶಿಕ್ಷೆಯಾಗುತ್ತದೆ. ಇನ್ನು ಈ ಪ್ರಕರಣದಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿದ್ದ ಮೊಹಮ್ಮದ್‌ ರಫೀಕ್‌ ಶೇಕ್‌ ಮತ್ತು ಮೊಹಮ್ಮದ್‌ ಹುಸೇನ್‌ ಫಾಜಿಲ್‌ ಎಂಬುವರನ್ನು ಖುಲಾಸೆಗೊಳಿಸಿ ಹೆಚ್ಚುವರಿ ಸೆಷನ್ಸ್‌ ಕೋರ್ಟಿನ ನ್ಯಾಯಾಧೀಶ ರಿತೇಶ್‌ ಸಿಂಗ್‌ ಗುರುವಾರ ಆದೇಶ ನೀಡಿದ್ದಾರೆ. ಈ ತೀರ್ಪು ಸ್ಫೋಟದಿಂದ ಕುಟುಂಬ ಸದಸ್ಯರನ್ನು ಕಳಕೊಂಡವರಿಗೆ ಸಮಾಧನಾ ತಂದಿಲ್ಲ. 2005ರ ಅ.25ರಂದು ದೆಹಲಿಯ ಸರೋಜಿನಿ ನಗರ, ಪಹಾರ್‌ಗಂಜ್‌ ಮತ್ತು ಕಾಲ್ಕಜಿ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿ 67 ಮಂದಿ ಅಸುನೀಗಿ, 225 ಮಂದಿ ಗಾಯಗೊಂಡಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next