Advertisement

ಸೌದಿ ಕ್ಷಮಾದಾನ: 20,000 ಅಕ್ರಮ ಭಾರತೀಯ ವಲಸಿಗರು ಮರಳಿ ದೇಶಕ್ಕೆ

11:29 AM May 03, 2017 | udayavani editorial |

ಚೆನ್ನೈ : ಸೌದಿ ಅರೇಬಿಯಕ್ಕೆ ಅಕ್ರಮವಾಗಿ ವಲಸೆ ಹೋದ, ವೀಸಾ ಅವಧಿ ಮೀರಿ ನೆಲೆ ನಿಂತ, ತಮಿಳು ನಾಡಿನ ವಲಸಿಗರೇ ಅಧಿಕ ಸಂಖ್ಯೆಯಲ್ಲಿರುವ ಸಹಸ್ರಾರು ಜನರು, ಇದೀಗ ಸೌದಿ ಸರಕಾರ ನೀಡಿರುವ 90 ದಿನಗಳ ಕ್ಷಮಾದಾನ ಅವಧಿಯ ಲಾಭವನ್ನು ಪಡೆದು ಸ್ವದೇಶಕ್ಕೆ ಮರಳಲು ಸಿದ್ಧರಾಗಿ ನಿಂತಿದ್ದಾರೆ. 

Advertisement

ಸಮುದಾಯ ಕಲ್ಯಾಣ ಆಪ್ತ ಸಮಾಲೋಚಕ ಅನಿಲ್‌ ನೌತಿಯಾಲ್‌ ಅವರು ರಿಯಾಧ್‌ನಿಂದ ಟೈಮ್ಸ್‌ ಆಫ್ ಇಂಡಿಯಾ ಜತೆಗೆ ಮಾತನಾಡುತ್ತಾ, ಕಳೆದ ಸೋಮವಾರದ ಸಂಜೆಯ ತನಕ  20,321 ಭಾರತೀಯ ಪ್ರಜೆಗಳು ಸ್ವದೇಶಕ್ಕೆ ಮರಳಲು ಸಿದ್ಧರಾಗಿ ನಿಂತಿದ್ದಾರೆ ಎಂದು ತಿಳಿಸಿದ್ದಾರೆ. 

ತಮಿಳು ನಾಡಿನ ಸುಮಾರು 1,500 ಮಂದಿ ಕಾರ್ಖಾನೆ ಕಾರ್ಮಿಕರು ಸೌದಿ ಸರಕಾರದ 90 ದಿನಗಳ ಕ್ಷಮಾದಾನ ಯೋಜನೆಯ ಲಾಭ ಪಡೆದ ದೇಶಕ್ಕೆ ಮರಳುತ್ತಿದ್ದಾರೆ . ಈ ಯೋಜನೆಯಡಿ ದೇಶಕ್ಕೆ ಮರಳು ನಿಂತಿರುವ ಅತ್ಯಧಿಕ ಕಾರ್ಮಿಕರು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸೇರಿದವರಾಗಿದ್ದಾರೆ ಎಂದು ಅನಿಲ್‌ ನೌತಿಯಾಲ್‌ ತಿಳಿಸಿದ್ದಾರೆ. 

ಸೌದಿ ಸರಕಾರ ರಿಯಾಧ್‌ನಲ್ಲಿ ಸ್ವದೇಶಕ್ಕೆ ಮರಳ ಬಯಸುವ ಭಾರತೀಯ ಪ್ರಜೆಗಳಿಗಾಗಿಯೇ ಮೀಸಲಿರುವ ಕೇಂದ್ರವೊಂದನ್ನು ತೆರೆದಿದೆ ಎಂದು ಅನಿಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next