Advertisement

2000 ವರ್ಷ ಹಳೆಯ ಗಣೇಶ!

12:12 AM Sep 02, 2019 | sudhir |

ಮುಂಬಯಿ: ಮುಂದಿನ 10 ದಿನಗಳ ಕಾಲ ಇಡೀ ಮುಂಬಯಿ ಗಣೇಶೋತ್ಸವದ ಸಂಭ್ರಮದಲ್ಲಿ ಮುಳುಗಲಿದೆ. ಆದರೆ, ಅದಕ್ಕೂ ಮುನ್ನವೇ ಇಲ್ಲಿನ ಜಹಾಂಗೀರ್‌ ಆರ್ಟ್‌ ಗ್ಯಾಲರಿಯಲ್ಲಿ ಆರಂಭವಾಗಿರುವ “ಗಣಪತಿಯ ವಸ್ತುಪ್ರದ ರ್ಶನ’ವು ಮುಂಬಯಿಗರನ್ನು ಕೈಬೀಸಿ ಕರೆಯುತ್ತಿದೆ.

Advertisement

ಅದರಲ್ಲೂ ವಿಶೇಷವೆಂದರೆ, ಬರೋಬ್ಬರಿ 2 ಸಾವಿರ ವರ್ಷಗಳಷ್ಟು ಹಳೆಯ ಗಣಪತಿ ಮೂರ್ತಿಯೊಂದನ್ನು ಇಲ್ಲಿ ಪ್ರದರ್ಶನಕ್ಕಿಡ ಲಾಗಿದ್ದು, ಅದನ್ನು ಕಣ್ತುಂಬಿಕೊಳ್ಳಲು ಜನರು ಈ ವಸ್ತುಪ್ರದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ.

ಒಂದನೇ ಶತಮಾನದ ಗಣೇಶ: 2 ಸಾವಿರ ವರ್ಷಗಳಷ್ಟು ಪುರಾತನವಾದ ಅಂದರೆ ಒಂದನೇ ಶತಮಾನದಲ್ಲಿ ಕೆತ್ತಲಾಗಿದೆ ಎನ್ನಲಾದ ಗಣೇಶನ ಮೂರ್ತಿಯನ್ನು ಇಲ್ಲಿ ಜತನದಿಂದ ಕಾಪಿಡಲಾಗಿದೆ. “ಅತ್ಯಂತ ಪುರಾತನ ಗಣಪತಿ ಮೂರ್ತಿ ಚೀನಾದಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದಿರುವುದು ಚೀನಾ ದಲ್ಲಲ್ಲ, ನನ್ನ ಬಳಿ’ ಎನ್ನುತ್ತಾರೆ ಈ ಪ್ರದರ್ಶನದ ಆಯೋಜಕ ಹಾಗೂ ಈ ಎಲ್ಲ ಗಣಪತಿ ಮೂರ್ತಿಗಳ ಸಂಗ್ರಹಕಾರ ಖ್ಯಾತ ವೈದ್ಯ ಪ್ರಕಾಶ್‌ ಕೊಥಾರಿ.

ಇಲ್ಲಿದ್ದಾನೆ ವಿಧವಿಧದ ವಿನಾಯಕ: ನಾಣ್ಯಗಳಲ್ಲಿ ಕೆತ್ತಿರುವ ವಿನಾಯಕ, ವಿದೇಶಿ ಕರೆನ್ಸಿ ಹಾಗೂ ಅಂಚೆಚೀಟಿಗಳಲ್ಲಿ ಚಿತ್ರಿಸಲಾದ ಗಣೇಶ, ಆಭರಣಗಳು, ಬೆಂಕಿಪೊಟ್ಟಣಗಳು, ಚಮಚಗಳಲ್ಲಿ ಚಿತ್ರಿಸಲಾದ ಗಣಪತಿ, ಗಣೇಶನ ಪೋಸ್ಟ್‌ಕಾರ್ಡ್‌ಗಳು ಹಾಗೂ ಕಲಾಕೃತಿಗಳು ಸೇರಿದಂತೆ ವಿವಿಧ ರೂಪಗಳ ಗಣೇಶನನ್ನು ಇಲ್ಲಿ ಕಾಣಬಹುದು. ಡಾ. ಪ್ರಕಾಶ್‌ ಅವರು ಜಗತ್ತಿನ ಮೂಲೆ ಮೂಲೆಗಳಿಂದ ಇವುಗಳನ್ನು ತಂದು ಸಂಗ್ರಹಿಸಿಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next