Advertisement

ಡಿ.31ರ ಬಳಿಕ 2 ಸಾವಿರ ನೋಟು ರದ್ದು, ವಾಟ್ಸ್‌ಆಪ್‌ ಸಂದೇಶ ಸುಳ್ಳು!

09:59 AM Dec 18, 2019 | Team Udayavani |

ನವದೆಹಲಿ: “ಡಿ.31ರ ಬಳಿಕ 2 ಸಾವಿರ ರೂ. ಮುಖ ಬೆಲೆಯ ನೋಟು ಅಮಾನ್ಯಗೊಳ್ಳುತ್ತದೆ. ಅದಕ್ಕಿಂತ ಮೊದಲು ಅದನ್ನು ಬದಲಾವಣೆ ಮಾಡಿಸಿಕೊಳ್ಳಿ. ಆರ್‌ಬಿಐ ಸದ್ಯ ರದ್ದಾಗಿರುವ 1 ಸಾವಿರ ರೂ. ನೋಟು ಮತ್ತೆ ಜಾರಿಗೆ ತರುತ್ತದೆ’ ಎಂಬ ಸಂದೇಶ ಸುಳ್ಳು ಎಂದು ಕೇಂದ್ರ ಸರ್ಕಾರ ಹೇಳಿದೆ.

Advertisement

ವಾಟ್ಸ್‌ಆ್ಯಪ್‌ ಮೂಲಕ ಹಲವು ದಿನಗಳಿಂದ ಈ ರೀತಿಯ ಸಂದೇಶ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ವ್ಯಾಪ್ತಿಯ ಪ್ರಸ್‌ ಇನ್ಫೋರ್ಮೇಶನ್‌ ಬ್ಯೂರೋ ಈ ಸಂದೇಶ ಸುಳ್ಳು ಎಂದು ಟ್ವೀಟ್‌ ಮಾಡಿದೆ. ದೇಶದ ಹಲವು ಭಾಗಗಳಲ್ಲಿ ಈ ಸಂದೇಶ ಸ್ವೀಕರಿಸಿದ ಹಲವಾರು ಮಂದಿ ವಿವಿಧ ಬ್ಯಾಂಕ್‌ಗಳಿಗೆ ಭೇಟಿ ಮಾಡಿ 2 ಸಾವಿರ ನೋಟು ಬದಲು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಬಿಐ, 2000 ರೂ. ನೋಟು ಹಿಂಪಡೆಯುವ ಕುರುತಂತೆ ತಾನು ಈ ರೀತಿಯ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಡಿ.11ರಂದು ವಿತ್ತ ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಕೂಡ 2 ಸಾವಿರ ನೋಟು ರದ್ದು ಮಾಡುವುದಿಲ್ಲ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next