Advertisement

Finance: 2,000 ರೂ.ನೋಟು ಶೇ.97ರಷ್ಟು ವಾಪಸ್‌

12:49 AM Nov 02, 2023 | Pranav MS |

ಮುಂಬಯಿ: 2,000 ಮುಖಬೆಲೆಯ ನೋಟುಗಳ ಪೈಕಿ ಶೇ.97ರಷ್ಟು ನೋಟುಗಳು ಈಗಾಗಲೇ ಬ್ಯಾಂಕ್‌ಗಳಿಗೆ ಜಮೆಯಾಗಿದ್ದು, ಉಳಿದಂತೆ 10,000 ಕೋಟಿ ರೂ.ಮೌಲ್ಯದ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ಬಳಿ ಇದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ)ತಿಳಿಸಿದೆ.

Advertisement

ಮೇ19ರಂದು 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿದ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ 2,000 ಮುಖಬೆಲೆಯ ನೋಟುಗಳ ಮೌಲ್ಯ 3.56 ಲಕ್ಷ ಕೋಟಿ ರೂ.ಗಳಾಗಿತ್ತು. ಅಂದಿನಿಂದ ಅ.31ರ ವರೆಗೆ ಒಟ್ಟು ಶೇ.97ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ನೋಟುಗಳನ್ನು ಹಿಂದಿರುಗಿಸಲು ಆರ್‌ಬಿಐ ಈ ಹಿಂದೆಯೂ ಹಲವು ಬಾರಿ ಗಡುವು ನೀಡಿತ್ತು. ಆದಾಗ್ಯೂ, ಇನ್ನೂ ಶೇ.3ರಷ್ಟು ನೋಟುಗಳು ಹಿಂದಿರುಗುವುದು ಬಾಕಿ ಉಳಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next