Advertisement

2000 ರೂ. ಮುದ್ರಣ ಸ್ಥಗಿತ?

12:30 AM Jan 04, 2019 | Team Udayavani |

ಹೊಸದಿಲ್ಲಿ: ನೋಟು ಅಮಾನ್ಯ ಘೋಷಣೆ (2016) ಮಾಡಿದ ನಂತರ ಹೊಸತಾಗಿ ಚಲಾವಣೆಗೆ ತರಲಾಗಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ಪ್ರಮಾಣವನ್ನು ಆರ್‌ಬಿಐ ತಗ್ಗಿಸಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೀಗಾಗಿ ನಿಧಾನವಾಗಿ ನೋಟನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್‌ಬಿಐ, ಕಾಲ ಕಾಲಕ್ಕೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಸಂಖ್ಯೆಯನ್ನು ಅವಲಂಬಿಸಿ ನೋಟು ಮುದ್ರಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದೆ. ಆರ್‌ಬಿಐ ಮಾಹಿತಿ ಪ್ರಕಾರ, 2 ಸಾವಿರ ರೂ. ಮುಖಬೆಲೆಯ 3,285 ದಶಲಕ್ಷ ನೋಟುಗಳು 2017ರ ಮಾರ್ಚ್‌ವರೆಗೆ ಚಲಾವಣೆಯಲ್ಲಿದ್ದವು. 2017ರಲ್ಲಿ ಶೇ.50.2ರಷ್ಟಿದ್ದ 2 ಸಾವಿರ ರೂ.ಗಳ ನೋಟುಗಳ ಪ್ರಮಾಣ 2018ರ ಮಾರ್ಚ್‌ ವೇಳೆಗೆ ಶೇ.37.3ಕ್ಕೆ ಇಳಿಕೆಯಾದವು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next