Advertisement
ಸದ್ಯ ಆರ್‌ಬಿಐ 2000 ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸಿದೆ ಎಂದು ಹೇಳಲಾಗಿದೆ. ಇದಕ್ಕೆ ಬದಲಾಗಿ 200 ಮುಖಬೆಲೆಯ ನೋಟುಗಳ ಮುದ್ರಣ ವೇಗವಾಗಿ ಸಾಗುತ್ತಿದೆ ಎಂದು ಹೇಳಲಾ ಗುತ್ತಿದ್ದು, ಆಗಸ್ಟ್‌ನಲ್ಲಿ ಈ ನೋಟುಗಳು ಚಲಾವಣೆಗೆ ಬರಲಿವೆ ಎಂದು ಕೇಂದ್ರ ಸರಕಾರವೇ ಹೇಳಿದೆ. ಅಲ್ಲದೆ ಬ್ಯಾಂಕುಗಳು 2000 ಮುಖಬೆಲೆಯ ನೋಟುಗಳಿಗೆ ಬೇಡಿಕೆ ಸಲ್ಲಿಸಿದ್ದರೆ, ಆರ್‌ಬಿಐ ಪೂರೈಸಲು ಒಪ್ಪುತ್ತಿಲ್ಲವೆಂದು ಹೇಳಲಾಗಿದೆ. ಹೀಗಾಗಿ, 2000 ರೂ. ಮುಖಬೆಲೆಯ ನೋಟಿನ ಲೀಗಲ್ ಟೆಂಡರ್ ರದ್ದಾಗಲಿದೆ ಎಂಬ ಮಾತುಗಳು ಹೆಚ್ಚಾಗಿವೆ.
ಇದಷ್ಟೇ ಅಲ್ಲ, ಆರ್‌ಬಿಐ 2000 ರೂ. ನೋಟುಗಳ ಮುದ್ರಣ ನಿಲ್ಲಿಸಿದೆ. ಈಗ ಮತ್ತೂಮ್ಮೆ ನೋಟು ಅಮಾನ್ಯ ಕ್ರಮಕ್ಕೆ ಮುಂದಾಗುತ್ತೀರಾ ಎಂದು ಪ್ರಶ್ನಿಸಿ, ಸಚಿವರ ಸ್ಪಷ್ಟನೆಗೂ ಆಗ್ರಹಿಸಿದರು. ಇದಕ್ಕೂ ಉತ್ತರಿ ಸದೇ ಜೇಟಿÉ ಅವರು ಮೌನದಿಂದಲೇ ಕುಳಿತಿದ್ದರು. ಅದಕ್ಕೆ ಪೂರಕವಾಗಿ ಲೇವಡಿ ಮಾಡಿದ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ “1 ಸಾವಿರ ಮುಖಬೆಲೆ ನಾಣ್ಯ ಬಿಡುಗ ಡೆಗೆ ಸಿದ್ಧತೆ ನಡೆಸುತ್ತಿರುವುದು ಸತ್ಯವೇ? ಅದಕ್ಕಾಗಿ ನಾವು ಬ್ಯಾಗ್ ಖರೀದಿ ಮಾಡಬೇಕೇ. ನಮ್ಮ ಸಹೋದರಿಯರ ಬಳಿ ಪರ್ಸ್ ಮಾತ್ರ ಇದೆ. ಈ ನಿಟ್ಟಿನಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದರು.
Related Articles
ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಾಡಿದ ಮೊದಲ ಭಾಷಣವೇ ವಿವಾದ ಸೃಷ್ಟಿಸಿದೆ. ಭಾಷಣದ ವಿಷಯ ಬುಧವಾರ ರಾಜ್ಯಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.
ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಮಾತನಾಡಿ, “ದೇಶ ಕಟ್ಟುವಲ್ಲಿ ಮಹಾತ್ಮ ಗಾಂಧಿ, ದೇಶದ ಪ್ರಥಮ ಪ್ರಧಾನಿ ಜವಹರ್‌ಲಾಲ್ ನೆಹರೂ ಅವರ ಕೊಡುಗೆ ಮಹತ್ವದ್ದಾಗಿದೆ. ಮಹಾತ್ಮ ಗಾಂಧಿ ಅವರನ್ನು ಇಡೀ ದೇಶವೇ ಗೌರವಿಸುತ್ತದೆ. ಅದೇ ರೀತಿ ಪ್ರಥಮ ಪ್ರಧಾನಿ ನೆಹರು ಅವರೂ ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ರಾಷ್ಟ್ರಪತಿ ಯವರು ಇಂಥ ಮಹನೀಯರನ್ನು ಮರೆತದ್ದು ಸರಿಯಲ್ಲ,’ ಎಂದು ಆಕ್ಷೇಪಿಸಿದರು.
Advertisement
ಈ ಆರೋಪದಿಂದ ಕೆರಳಿದ ಹಣಕಾಸು ಸಚಿವ ಅರುಣ್ ಜೇಟಿÉ, ಆನಂದ್ ಶರ್ಮಾ ಅವರ ಸಂಪೂರ್ಣ ಭಾಷಣವನ್ನು ಕಲಾಪದ ಕಡತದಿಂದ ತೆಗೆಯುವಂತೆ ಸೂಚಿಸಿದ್ದು, ಜತೆಗೆ “ಶೂನ್ಯ ಅವಧಿ ಇರುವುದು ಟಿವಿ ಕ್ಯಾಮೆರಾಗಳ ಲಾಭಕ್ಕಾಗಿ ಅಲ್ಲ. ಆದರೆ ಇಲ್ಲಿ ಅದೇ ನಡೆಯುತ್ತಿದೆ,’ ಎಂದಾಗ ಕಾಂಗ್ರೆಸಿಗರು ಪ್ರತಿಭಟಿಸಿದರು.
ಪಾಪ ಮಾಡಲಾರೆ!: “ಇರಾಕ್‌ನ ಮೊಸುಲ್‌ನಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾದ 39 ಭಾರತೀಯರು ಅಸುನೀಗಿದ್ದಾರೆ ಎನ್ನಲು ಯಾವುದೇ ಆಧಾರವಿಲ್ಲ. ಹೀಗಾಗಿ ಅವರೆಲ್ಲ ಬದುಕಿಲ್ಲ ಎಂದು ಘೋಷಿಸುವ ಮೂಲಕ ಪಾಪ ಮಾಡಲು ನಾನು ಸಿದ್ಧಳಿಲ್ಲ,’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಅಪಹೃತರೆಲ್ಲ ಬದುಕಿದ್ದಾರೆ ಎನ್ನುವ ಮೂಲಕ ಸಚಿವರು ದೇಶದ ನಾಗರಿಕರನ್ನು ವಂಚಿಸುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ, “ಅವರ ಸಾವಿನ ಬಗ್ಗೆ ಸಾಕ್ಷ್ಯಗಳು ದೊರೆಯುವವರೆಗೂ ಅವರನ್ನು ಹುಡುಕುವ ಪ್ರಯತ್ನ ನಿಲ್ಲುವುದಿಲ್ಲ,’ ಎಂದರು.
ನಡೆಯದ ಕಲಾಪ: ಕಾಂಗ್ರೆಸ್‌ನ ಆರು ಸಂದರನ್ನು ಅಮಾನತು ಮಾಡಿದ್ದು, ಗೋಹತ್ಯೆ ನೆಪದಲ್ಲಿ ದೇಶದ ವಿವಿಧೆಡೆ ಥಳಿತ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಲೋಕಸಭೆಯಲ್ಲಿ ಆಗಾಗ ಗದ್ದಲ ಎಬ್ಬಿಸಿದವು. ಹೀಗಾಗಿ ಬುಧವಾರ ಮಧ್ಯಾಹ್ನದ ಬಳಿಕವೇ ಎರಡು ಬಾರಿ ಕಲಾಪವನ್ನು ಮುಂದೂಡಿದ ಘಟನೆ ನಡೆಯಿತು. ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾಂಗ್ರೆಸ್ ಸಂಸದರು ಸರಕಾರದ ವಿರುದ್ಧ ಘೋಷಣೆ ಕೂಗಿದ್ದರಿಂದ ಭಾರೀ ಗದ್ದಲ ಉಂಟಾಗಿ, ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.