Advertisement

ಸ್ಪೇನ್ ನಲ್ಲಿ 2000 ಹೊಸ ಕೊರೊನಾ ಪ್ರಕರಣ; 24 ಗಂಟೆಯಲ್ಲಿ 100ಕ್ಕೂ ಹೆಚ್ಚು ಸಾವು

01:18 AM Mar 21, 2020 | keerthan |

ಮ್ಯಾಡ್ರಿಡ್: ಕೊರೊನಾ ವೈರಸ್ ಚೀನಾದಲ್ಲಿ ತಮ್ಮ ಪ್ರಭಾವವನ್ನು ಕಡಿಮೆ ಮಾಡಿದ್ದರೂ ಯೂರೋಪ್ ದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಟಲಿ ಮತ್ತು ಸ್ಪೇನ್ ನಲ್ಲಿ ಇದರ ಪ್ರಮಾಣ ತೀವ್ರವಾಗಿದ್ದು, ಸ್ಪೇನ್ ನಲ್ಲಿ 288 ಜನರು ಸಾವನ್ನಪ್ಪಿದ್ದಾರೆ.

Advertisement

ರವಿವಾರ ದಿನವೊಂದರಲ್ಲಿ ಸ್ಪೇನ್ ನಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ಸ್ಪೇನ್ ಒಂದರಲ್ಲೇ ಈ ಮಾರಣಾಂತಿಕ ಸೋಂಕು ಪೀಡಿತರ ಸಂಖ್ಯೆ 7,753 ಕ್ಕೇರಿದೆ. ಇಟಲಿ ಹೊರತುಪಡಿಸಿದರೆ ಅತೀ ಹೆಚ್ಚು ಸಮಸ್ಯೆ ಅನುಭವಿಸಿರುವುದು ಸ್ಪೇನ್.

ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನ ಕಾರಣದಿಂದ ಸ್ಪೇನ್ ನಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವಿಶ್ವದಲ್ಲಿ ಇದುವರೆಗೆ ಆರು ಸಾವಿರಕ್ಕೂ ಹೆಚ್ಚಿನ ಜನರು ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ನೂರು ದಾಟಿದ್ದು, ಕರ್ನಾಟಕದಲ್ಲಿ ಇದುವರೆಗೆ ಏಳು ಪ್ರಕರಣಗಳು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next