Advertisement
ಹೀಗಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಸತಿ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಅಧಿಕಾರಿಗಳೇ ಫಲಾನುಭವಿಗಳ ಮನೆಗೆ ಹೋಗಿ ದುಂಬಾಲು ಬಿದ್ದರೂ, ವಸತಿ ನಿರ್ಮಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಸಕಾಲದಲ್ಲಿ ಮನೆ ನಿರ್ಮಾಣ ಮಾಡದ ಕಾರಣ ಯೋಜನೆ ಫಲಾನುಭವಿಗಳ ಕೈತಪ್ಪುವ ಸಾಧ್ಯತೆಯಿದೆ.
Related Articles
Advertisement
ಬೆಂಗಳೂರು ಪೂರ್ವ ತಾಲೂಕಿನಲ್ಲಿ 191 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಇದರಲ್ಲಿ ಕೇವಲ 4 (ಶೇ.2.9) ಮನೆ ನಿರ್ಮಿಸಲಾಗಿದೆ. ಹಾಗೇ ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿ 767 ಮನೆಗಳ ಗುರಿ ಪೈಕಿ ಕೇವಲ 66 (ಶೇ.8.6) ಮನೆಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 575 ಮನೆಗಳ ಗುರಿಯಲ್ಲಿ ಕೇವಲ 27 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಶೇ.4.7ರಷ್ಟು ಪ್ರಗತಿ ಸಾಧಿಸಲಾಗಿದೆ.
ವಸತಿ ನಿರ್ಮಾಣಕ್ಕೆ ನಿರಾಸಕ್ತಿ ಏಕೆ?: ಫಲಾನುಭವಿಗಳು ಸಕಾಲಕ್ಕೆ ಮನೆ ನಿರ್ಮಾಣ ಮಾಡದೇ ಇರುವುದಕ್ಕೆ ಏನು ಕಾರಣ ಎಂದು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮನೆಕಟ್ಟಲು ಬೇಕಾಗುವ ಮರಳು, ಕಲ್ಲು ಸೇರಿದಂತೆ ಅಗತ್ಯ ಪರಿಕರಗಳ ಬೆಲೆ ದುಪ್ಪಟ್ಟಾಗಿರುವ ಕಾರಣವನ್ನು ಫಲಾನುಭವಿಗಳು ನೀಡುತ್ತಿದ್ದಾರೆ. ಇದರೊಂದಿಗೆ ಸರ್ಕಾರ ನೀಡುತ್ತಿರುವ ಅನುದಾನ ನಗರ ಪ್ರದೇಶದ ವ್ಯಾಪ್ತಿಯ ಫಲಾನುಭವಿಗಳಿಗೆ ಸಾಕಾಗುತ್ತಿಲ್ಲ ಎಂದು ದೂರುತ್ತಾರೆ ಎಂದು ಮಾಹಿತಿ ನೀಡಿದರು.
ಯಾವ ಯೋಜನೆಗೆ ಎಷ್ಟು ಅನುದಾನ: ರಾಜ್ಯ ಸರ್ಕಾರ ಬಸವ ಯೋಜನೆಯಡಿ 1,34,800 ರೂ. ಅನುದಾನ ನೀಡುತ್ತದೆ. ಹಾಗೇ ಕೇಂದ್ರ ಸರ್ಕಾರ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ 1,64,800 ರೂ. ಅನುದಾನ ನೀಡುತ್ತದೆ.
‘ಫಲಾನುಭವಿ ಮನೆಯ ಅಡಿಪಾಯ ಹಾಕಿದ ವೇಳೆ 35 ಸಾವಿರ ರೂ. ಬಿಡುಗಡೆ ಮಾಡಲಾಗುತ್ತದೆ. ಉಳಿದ ಹಣ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ. ಒಂದೊಮ್ಮೆ ಫಲಾನುಭವಿಯು ತನಗೆ ವಸತಿ ಮಂಜೂರಾದ 3 ತಿಂಗಳ ಒಳಗೆ ನಿರ್ಮಾಣ ಕಾರ್ಯ ಆರಂಭಿಸದಿದ್ದರೆ ಆತನಿಗೆ ಮಂಜೂರಾದ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ,’ ಎಂದು ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿ ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
•ಬೆಂಗಳೂರು ನಗರ ಜಿ.ಪಂ.ಗೆ ಗುರಿ ಸಾಧನೆ ಚಿಂತೆ
•ಈವರೆಗೆ ಸಾಧಿಸಿರುವ ಪ್ರಗತಿ ಶೇ.6.58ರಷ್ಟು ಮಾತ್ರ
•ಮನೆ ನಿರ್ಮಿಸದವರನ್ನು ಪಟ್ಟಿಯಿಂದ ಕೈಬಿಡಲು ಚಿಂತನೆ
•ಹೊಸ ಫಲಾನುಭವಿಗಳಗೆ ಅವಕಾಶ ನೀಡುವ ಸಾಧ್ಯತೆ
•ಪರಿಕರಗಳ ಬೆಲೆ ದುಪ್ಪಟ್ಟಾಗಿರುವ ಕಾರಣ ಹಿಂದೇಟು
● ದೇವೇಶ ಸೂರಗುಪ್ಪ