Advertisement

2 ಸಾವಿರ ರೂ.ಮುಖಬೆಲೆಯ ನಕಲಿ ನೋಟು ಪತ್ತೆ; ಓರ್ವನ ಬಂಧನ

09:24 AM Aug 17, 2019 | Team Udayavani |

ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ ಬಳಿ 2 ಸಾವಿರ ರೂ.ಮುಖ ಬೆಲೆಯ ಕಂತೆ-ಕಂತೆ ನಕಲಿ ನೋಟುಗಳು ಪತ್ತೆಯಾಗಿದ್ದು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಗೂಡ್ಸ್ ಆಟೋದಲ್ಲಿ ನಕಲಿ ನೋಟುಗಳನ್ನು ಸಾಗಿಸುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿಕ್ಕಹೊಳೆ ಜಲಾಶಯದ ಬಳಿ ಗೂಡ್ಸ್ ಆಟೋವನ್ನು ತಪಾಸಣೆ ನಡೆಸಿದರು. ಆಗ ಕಲರ್‌ ಜೆರಾಕ್ಸ್‌ ಮಾಡಿದ ನಕಲಿ ನೋಟುಗಳು ಪತ್ತೆಯಾದವು. ತಕ್ಷಣವೇ ಪೊಲೀಸರು ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಗೂಡ್ಸ್ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಮಸಮುದ್ರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next