Advertisement

2,000 ಮುಖಬೆಲೆಯ ಶೇ.76 ನೋಟು ಬ್ಯಾಂಕ್‌ಗೆ

12:38 AM Jul 04, 2023 | |

ಹೊಸದಿಲ್ಲಿ: ದೇಶದಲ್ಲಿ 2,000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸುವು ದಾಗಿ ಆರ್‌ಬಿಐ ಘೋಷಿಸಿದಾಗಿನಿಂದ 2.72 ಲಕ್ಷ ಕೋಟಿ ಮೌಲ್ಯದ 2,000 ರೂ.ಗಳ ನೋಟುಗಳನ್ನು ಜನರು ಬ್ಯಾಂಕ್‌ಗಳಿಗೆ ಹಿಂದಿ ರುಗಿಸಿದ್ದಾರೆಂದು ಆರ್‌ಬಿಐ ಸೋಮವಾರ ತಿಳಿಸಿದೆ.

Advertisement

ಎಲ್ಲ ನೋಟುಗಳನ್ನೂ ಸೆ.30ರ ಒಳಗೆ ಹಿಂದಿರುಗಿಸುವಂತೆ ಜನರಿಗೆ ಆರ್‌ಬಿಐ ಕರೆ ನೀಡಿತ್ತು. ಮೇ.19ರಂದು ನೋಟು ಹಿಂಪಡೆವ ಬಗ್ಗೆ ಘೋಷಿಸಿದಾಗಿನಿಂದ ಜೂನ್‌ 30ರ ವರೆಗೆ 2 ಸಾವಿರ ರೂ. ನೋಟುಗಳ ಚಲಾ ವಣೆಯು 3.56 ಲಕ್ಷ ಕೋಟಿ ರೂ.ಗಳಿಂದ 84,000 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ.

ಈಗ ಬದಲಿಸಿಕೊಂಡಿ ರುವ ನೋಟುಗಳ ಪೈಕಿ ಶೇ.87ರಷ್ಟು ನೋಟುಗಳನ್ನು ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದಾರೆ. ಉಳಿದಂತೆ ಶೇ.13ರಷ್ಟು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾ ಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next