ಮುಂಬಯಿ: ಈ ವರ್ಷದ ಡಿಸೆಂಬರ್ ವೇಳೆಗೆ 2,000 ಎಲೆಕ್ಟ್ರಿಕ್ ಬಸ್‌ಗಳು ಹಂತ ಹಂತವಾಗಿ ಮುಂಬಯಿಗೆ ಆಗಮಿಸಲಿವೆ ಎಂದು ಬೆಸ್ಟ್‌ನ ಜನರಲ್ ಮ್ಯಾನೇಜರ್ ಲೋಕೇಶ್ ಚಂದ್ರ ಮಾಹಿತಿ ನೀಡಿದ್ದಾರೆ.
ಬಸ್‌ಗಳ ಸಂಖ್ಯೆ ಹೆಚ್ಚಾದಂತೆ ಮಹಿಳೆಯರಿಗಾಗಿ ಕಾಯ್ದಿರಿಸಿದ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿದ್ಯುತ್ ಚಾಲಿತ ಬಸ್‌ಗಳಿಗಾಗಿ ಕೇಂದ್ರವು ಯೋಜನೆಯನ್ನು ಜಾರಿಗೊಳಿಸುತ್ತಿದೆ. ವಾಯು ಮಾಲಿನ್ಯವಿಲ್ಲದ ಕಾರಣ ಬೆಸ್ಟ್ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಪ್ರಸ್ತುತ ಬೆಸ್ಟ್ ಡೀಸೆಲ್ ಮತ್ತು ಸಿಎನ್‌ಐ ಬಸ್‌ಗಳಲ್ಲಿ 288 ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿದೆ. ಎಲೆಕ್ಟ್ರಿಕ್ ಬಸ್‌ಗಳು ಕಡಿಮೆ ವೆಚ್ಚದೊಂದಿಗೆ ಪರಿಸರ ಸ್ನೇಹಿಯಾಗಿರುವುದರಿಂದ ಹೆಚ್ಚು ಹೆಚ್ಚು ಬಸ್‌ಗಳನ್ನು ಪರಿಚಯಿಸಲಾಗುವುದು ಎಂದು ಲೋಕೇಶ್ ಚಂದ್ರ ತಿಳಿಸಿದ್ದಾರೆ.
ಒಂದರಿಂದ ಎರಡು ತಿಂಗಳಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳು ಮುಂಬಯಿಗೆ ಬರಲಿದ್ದು, ಇವು ಒಂದೇ ಅಂತಸ್ತಿನ ಬಸ್‌ಗಳಾಗಿರುತ್ತವೆ. ಡಿಸೆಂಬರ್ ವೇಳೆಗೆ ವಿವಿಧ ಹಂತಗಳಲ್ಲಿ ಇನ್ನೂ 1,900 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ. ಇದು ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ದೊಡ್ಡ ಏಕ ಅಂತಸ್ತಿನ ಹಾಗೂ ಮಿಡಿ ಬಸ್‌ಗಳನ್ನು ಒಳಗೊಂಡಿರುತ್ತದೆ.
ಪ್ರಸ್ತುತ ತೇಜಸ್ವಿನಿ ಬಸ್‌ಗಳನ್ನು ಮಹಿಳೆಯರಿಗಾಗಿ ಬೆಸ್ಟ್ ಎಂಟಪ್ರೈಸಸ್ ನಡೆಸುತ್ತಿದೆ. ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ಬಸ್ ದರಗಳೂ ಇವೆ. ಮುಂಬರುವ ಎಲೆಕ್ಟ್ರಿಕ್ ಬಸ್‌ಗಳ ದೃಷ್ಟಿಯಿಂದ ಮಹಿಳಾ ವಿಶೇಷ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.