ಹಾಸನ: ರಾಜ್ಯದಲ್ಲಿ ಸರ್ಕಾರಿ ಉನ್ನತ ಶಿಕ್ಷಣಸಂಸ್ಥೆಗಳು ಮೂಲ ಸೌಕರ್ಯಗಳಕೊರತೆಯಿಂದ ಸೊರಗಿದ್ದು, ಸರ್ಕಾರ2021-21 ಸಾಲಿನಲ್ಲಿ ಕನಿಷ್ಠ 2000 ಕೋಟಿರೂ.ಗಳನ್ನು ಮೂಲ ಸೌಕರ್ಯಗಳಿಗೆಮಂಜೂರು ಮಾಡಬೇಕು ಎಂದು ಜೆಡಿಎಸ್‌ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖಮಾಡು ವಂತಾಗಿದೆ. ಹಾಗಾಗಿ ರಾಜ್ಯದಲ್ಲಿಉನ್ನತ ಶಿಕ್ಷಣವು ಖಾಸಗಿಯವರ ಹಿಡಿತದಲ್ಲಿದೆ. ಸರ್ಕಾರ ಸರ್ಕಾರಿ ಉನ್ನತ ಶಿಕ್ಷಣಸಂಸ್ಥೆಗಳ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆಮೂಲ ಸೌಕರ್ಯಗಳನ್ನು ಕಲ್ಪಿಸಲುಮುಂದಾಗಬೇಕು ಎಂದರು.
ರಾಜ್ಯದಲ್ಲಿ 431 ಸರ್ಕಾರಿ ಪ್ರಥಮದರ್ಜೆಕಾಲೇಜುಗಳಿವೆ. 85 ಸರ್ಕಾರಿ ಪಾಲಿಟೆಕ್ನಿಕ್‌ಕಾಲೇಜುಗಳು ಹಾಗೂ 14 ಸರ್ಕಾರಿಎಂಜಿನಿಯರಿಂಗ್ ಕಾಲೇಜುಗಳಿದ್ದು, ಈಸಂಸ್ಥೆಗಳಲ್ಲಿ ಸುಮಾರು 4.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ ಒಂದುದಶಕಗಳಿಂದ ಈ ಸರ್ಕಾರಿ ಸಂಸ್ಥೆಗಳಲ್ಲಿ ಸ್ವಂತಕಟ್ಟಡ, ತರಗತಿ ಕೊಠಡಿಗಳು, ಪ್ರಯೋಗಾಲಯ ವರ್ಕ್‌ಶಾಪ್‌ಗ್ಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯಗಳು, ಗ್ರಂಥಾಲಯಗಳು, ಕಂಪ್ಯೂಟರ್‌ಲ್ಯಾಬ್‌ಗಳ ಕೊರತೆಯಿಲ್ಲದೆ ಮೂಲಸೌಕರ್ಯಗಳ ಕೊರತೆ ಕಾಣುತ್ತಿದೆ. 525ಪ್ರಾಂಶುಪಾಲರ ಹುದ್ದೆಗಳಿಗೆ ಕೇವಲ 70ಹುದ್ದೆಗಳು ಮಾತ್ರ ಭರ್ತಿಯಾಗಿವೆ. 456ಹುದ್ದೆಗಳು ಖಾಲಿಯಿವೆ ಎಂದರು.
15,318 ಬೋಧಕರ ಹುದ್ದೆಗಳ ಪೈಕಿ,12,302 ಹುದ್ದೆಗಳು ಮಾತ್ರ ಭರ್ತಿಯಾಗಿವೆ.3 ಸಾವಿರ ಬೋಧಕರ ಹುದ್ದೆಗಳು ಖಾಲಿ ಇದೆ.19,030 ಬೋಧಕೇತರ ಹುದ್ದೆಗಳುಮಂಜೂರಾಗಿದ್ದರೂ, ಆ ಪೈಕಿ ಕೇವಲ 7,572ಹುದ್ದೆಗಳು ಭರ್ತಿಯಾಗಿವೆ. ಇನ್ನೂ 11,458ಬೋಧಕೇತರ ಹುದ್ದೆಗಳು ಖಾಲಿ ಇದೆ. ಈಸಂಸ್ಥೆಗಳಲ್ಲಿ ಕಟ್ಟಡ ಮೂಲ ಸೌಕರ್ಯಗಳಕೊರತೆಯನ್ನು ನೀಗಿಸಲು 2053 ತರಗತಿಕೊಠಡಿಗಳಿದ್ದು, 1,620 ಪ್ರಯೋಗಾಲಯಮತ್ತು ವರ್ಕಷಾಪ್‌ಗ್ಳು, 1,805ಶೌಚಾಲಯಗಳು, 272 ಗ್ರಂಥಾಲಯಕೊಠಡಿಗಳು 1304 ಅನುಷ್ಠಾನದಲ್ಲಿರುವಮುಂದುವರಿದ ಕಾಮಗಾರಿಗಳು ಒಟ್ಟು4042 ಕಾಮಗಾರಿಗಳನ್ನು ನಿುìಸಲು ಒಟ್ಟುರೂ. 2,431 ಕೋಟಿಗಳ ಅಗತ್ಯವಿದೆ.ಜತೆಗೆಕೊರತೆ ಇರುವ ಮೂಲಸೌಕರ್ಯಗಳನ್ನು ಕಲ್ಪಿಸಲು 625.34 ಕೋಟಿಗಳಅಗತ್ಯವಿದೆ.
2021-22ನೇ ಸಾಲಿನಲ್ಲಿ ರೂ.3758 ಕೋಟಿ ರೂಗಳ ಒದಗಿಸುವಂತೆ ಉನ್ನತಶಿಕ್ಷಣ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ2021-22ನೇ ಸಾಲಿನ ಆಯ-ವ್ಯಯದಲ್ಲಿಒಟ್ಟು 483.70 ಕೋಟಿ ರೂ.ಗಳನ್ನು ಮಾತ್ರಉನ್ನತ ಶಿಕ್ಷಣ ಇಲಾಖೆಯ ವಿವಿಧಲೆಕ್ಕಶೀರ್ಷಿಕೆಯಲ್ಲಿ ನೀಡಿದೆ ಎಂದು ಬೇಸರವ್ಯಕ್ತಪಡಿಸಿದರು.ಅಗತ್ಯವಿರುವ ಬೋಧಕರ ಹುದ್ದೆಗಳನ್ನುಸರ್ಕಾರದ ಭರ್ತಿ ಮಾಡಿಲ್ಲ ಕಾಲೇಜು ಶಿಕ್ಷಣಇಲಾಖೆಯಲ್ಲಿ 14,682 ಅತಿಥಿ ಉಪನ್ಯಾಸಕರು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 1,209ಉಪನ್ಯಾಸಕರು, ವಿವಿಗಳಲ್ಲಿ 2,704 ಒಟ್ಟು18,595 ಅತಿಥಿ ಉಪನ್ಯಾಸಕರುಕಾರ್ಯನಿರ್ವಸುತ್ತಿದ್ದಾರೆ. ಮಂಜೂರಾದಹುದ್ದೆಗಳ ಭರ್ತಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಕನಿಷ್ಠ2,000 ಕೋಟಿ ರೂ. ಅನುದಾನವನ್ನಾದರೂಮಂಜೂರು ಮಾಡಬೇಕು ಎಂದು ರೇವಣ್ಣಅವರು ಮನವಿ ಮಾಡಿದರು.