Advertisement

ರೋಮ್‌ನ ಕ್ರ್ಯೂಸ್‌ನಲ್ಲಿ 200 ಭಾರತೀಯರು ಬಂದಿ; 70 ದಿನಗಳಿಂದ ಕ್ವಾರಂಟೈನ್‌ನಲ್ಲಿ

07:06 AM May 26, 2020 | mahesh |

ಹೊಸದಿಲ್ಲಿ: ಐರೋಪ್ಯ ಒಕ್ಕೂಟದ ಐಷಾರಾಮಿ ವಿಲಾಸಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ 200 ಭಾರತೀಯ ಮೂಲದ ಸಿಬಂದಿ, ಇಟಲಿಯ ರೋಮ್‌ನ ಬಂದರಿನಲ್ಲಿ 70 ದಿನಗಳಿಂದ ಕ್ವಾರಂಟೈನ್‌ನಲ್ಲಿ ಸಿಲುಕಿದ್ದಾರೆ. ಬಹುತೇಕರು ಖನ್ನತೆಗೆ ಜಾರಿದ್ದಾರೆ ಎಂದು “ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿಮಾಡಿದೆ.

Advertisement

ಐಷಾರಾಮಿ ವಿಲಾಸಿ ಹಡಗಿನಲ್ಲಿ 7 ದಿನಗಳ ಕಾಲ ಯುರೋಪ್‌ ಪ್ರವಾಸ ಕೈಗೊಳ್ಳಲಾಗಿತ್ತು ಬಾರ್ಸಿಲೋನಾದಿಂದ ಹೊರಟು, ಫ್ರಾನ್ಸ್‌ನ ತೀರ ಸುತ್ತಾಡಿ, ರೋಮ್‌ನ ಸಿವಿಟಾವಾಚಿಯಾ ಬಂದರು ತಲುಪಿದಾಗ, ಲಾಕ್‌ಡೌನ್‌ನ ಬಿಸಿ ತಟ್ಟಿತು. ಮಾರ್ಚ್‌ 15ರ ಹೊತ್ತಿಗೆ ಇಟಲಿಯಲ್ಲಿ ಕೋವಿಡ್ ತೀವ್ರವಾಗಿ ಹಬ್ಬಿದ್ದರಿಂದ, ವಿಲಾಸಿ ಹಡಗು ಸಂಚಾರಕ್ಕೆ ನಿರ್ಬಂಧ ಸೂಚಿಸಲಾಗಿತ್ತು.

ಆತಂಕದ ಸ್ಥಿತಿ: 6 ಸಾವಿರ ಆಸನಗಳಿರುವ ವಿಶಾಲ ಹಡಗಿನಲ್ಲಿ ಎಲ್ಲರಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. “ಪಕ್ಕದ ಕೋಣೆಯಲ್ಲಿರುವ ನನ್ನ ಸಹೋದ್ಯೋಗಿಯನ್ನು ನೋಡದೆ ತಿಂಗಳುಗಳೇ ಆದವು. ವೈಫೈ, ಟಿವಿ ವ್ಯವಸ್ಥೆ ಇದೆಯಾದರೂ, ಎಲ್ಲರೂ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದೇವೆ. ನಿಗದಿತ ಸಮಯದಲ್ಲಿ ಬಾಗಿಲ ಬಳಿಗೆ ಊಟ ತಂದುಕೊಡುತ್ತಿದ್ದಾರೆ’ ಎಂದು ಹಡಗಿನಲ್ಲಿ ರೆಸ್ಟಾರೆಂಟ್‌ ಅಟೆಂಡರ್‌ ಆಗಿರುವ ಗೋವಾ ಮೂಲದ ರಾಹುಲ್‌ ಶಾನುಭಾಗ್‌ ಆತಂಕ ತೋಡಿಕೊಂಡಿದ್ದಾರೆ.

ಕ್ರ್ಯೂಸ್‌ನಲ್ಲಿ ಮಣಿಪುರ, ಮಹಾರಾಷ್ಟ್ರ, ಉತ್ತರಖಂಡ ಮೂಲದ ಪ್ರಜೆಗಳು ಸಿಲುಕಿದ್ದಾರೆ. ಹಡಗಿನ ಮಾಲೀಕರು ಇಟಲಿಯ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ, ತಾಯ್ನಾಡಿಗೆ ಮರಳಲು ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next