Advertisement

Zimbabwe: ಜಿಂಬಾಬ್ವೆಯಲ್ಲಿ ನೀರೇ ಇಲ್ಲದೆ 200 ಆನೆಗಳ ದಾರುಣ ಸಾವು

12:44 AM Dec 21, 2023 | Team Udayavani |

ಹರಾರೆ: ಆಫ್ರಿಕಾ ಖಂಡದ ಜಿಂಬಾಬ್ವೆಯಲ್ಲಿ ಬರಗಾಲದ ತೀವ್ರತೆಯ ಒಂದಲ್ಲ ಎರಡಲ್ಲ, 100 ಆನೆಗಳನ್ನು ಬಲಿಪಡೆದಿದೆ! ತೀವ್ರ ಬರಗಾಲದಿಂದ ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೇ ಇವುಗಳು ಅಸುನೀಗಿವೆ. ಅತೀದೊಡ್ಡ ರಾಷ್ಟ್ರೀಯ ಉದ್ಯಾನವನ ಹ್ವಾಂಗೇಯಲ್ಲಿ ಈ ದುರಂತ ಸಂಭವಿಸಿದೆ.

Advertisement

45 ಸಾವಿರ ಆನೆಗಳು, 100ಕ್ಕೂ ಅಧಿಕ ಸಸ್ತನಿಗಳು, 400ಕ್ಕೂ ಅಧಿಕ ಪಕ್ಷಿ ಪ್ರಭೇದಗಳು ಇಲ್ಲಿವೆ. ಮುಂದಿನ ದಿನಗಳಲ್ಲಿ ಪ್ರಾಣಿಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಾಧಾರಾಣ ವಯಸ್ಸಿನ ಆನೆಗೆ ಪ್ರತೀ ದಿನಕ್ಕೆ 200 ಲೀಟರ್‌ ನೀರು ಬೇಕಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next