Advertisement

ಡ್ರೈ ಫ್ರುಟ್ಸ್‌ ಖರೀದಿ ನೆಪ: 200 ಕೋಟಿ ರೂ. ವಂಚನೆ ಬಯಲು

01:54 AM Jan 13, 2021 | Team Udayavani |

ನೋಯ್ಡಾ: ಕರ್ನಾಟಕ ಸಹಿತ ದೇಶದ ಹಲವು ರಾಜ್ಯಗಳಲ್ಲಿರುವ ವ್ಯಾಪಾರಸ್ಥರಿಂದ ಡ್ರೈ  ಫ್ರುಟ್ಸ್‌ ಗಳನ್ನು ಖರೀದಿಸುವ ವಾಗ್ಧಾನ ಮಾಡಿ ಬರೋಬ್ಬರಿ 200 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಕ್ಕೆ ಸಂಬಂಧಿಸಿ ಮೋಹಿತ್‌ ಗೋಯಲ್‌ ಮತ್ತು ಇತರ ನಾಲ್ವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಗೋಯಲ್‌ ಬಳಿಯಿಂದ 60 ಕೆಜಿ ಡ್ರೈ  ಫ್ರುಟ್ಸ್‌, ಒಂದು ಆಡಿ ಕಾರು, ಕೆಲವೊಂದು ದಾಖಲೆ ಪತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

Advertisement

ಈತ ನೋಯ್ಡಾದ ಸೆಕ್ಟರ್‌ 62ರಲ್ಲಿರುವ  ವೈಭವೋಪೇತ “ಕೋರೆಂತಮ್‌’ ಕಾಂಪ್ಲೆಕ್ಸ್‌ನಲ್ಲಿ ಪ್ರತಿ ತಿಂಗಳು 3 ಲಕ್ಷ ರೂ. ಬಾಡಿಗೆ ನೀಡಿ ಕಚೇರಿಯನ್ನೂ ತೆರೆದಿದ್ದ. ಅದಕ್ಕೆ ಆತ “ದುಬಾೖ ಡ್ರೈ  ಫ್ರುಟ್ಸ್‌ ಆ್ಯಂಡ್‌ ಸ್ಪೈಸಸ್‌ ಹಬ್‌’ ಎಂಬ ಹೆಸರನ್ನೂ ಇರಿಸಿದ್ದ.

2017ರಲ್ಲಿಯೂ ಈತ “ಫ್ರೀಡಂ 251′ ಎಂಬ ಮೊಬೈಲ್‌ ನೀಡುವ, ಅತ್ಯಂತ ಕಡಿಮೆ ಬೆಲೆಗೆ ಎಲ್‌ಸಿಡಿ ಟಿವಿ ನೀಡುವ ಆಫ‌ರ್‌ ನೀಡಿ ಮರುಳು ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಗೋಯಲ್‌ನನ್ನು ಬಂಧಿಸಲಾಗಿತ್ತು.  ಕರ್ನಾಟಕ ಸಹಿತ ಹಲವು ರಾಜ್ಯಗಳಿಂದ ಆತನ ವಿರುದ್ಧ 40ಕ್ಕೂ ಹೆಚ್ಚು ಲಿಖೀತ ದೂರುಗಳು ಸಲ್ಲಿಕೆಯಾಗಿದ್ದವು. ಗೋಯಲ್‌ ಜತೆಗೆ ಇತರ ನಾಲ್ವರೂ ಇದ್ದರು. ಜತೆಗೆ ಮೂವರು ವಿದೇಶಿ ಪ್ರಜೆಗಳು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.  ಆತನ ಕಾರ್ಯವೈಖರಿ ಹೇಗಿತ್ತೆಂದರೆ ಮೊದಲು ಡ್ರೈ  ಫ್ರುಟ್ಸ್‌  ಖರೀದಿಸಿ ಕ್ಲಪ್ತ ಸಮಯಕ್ಕೆ ಪಾವತಿ ಮಾಡಿ ವ್ಯಾಪಾರಸ್ಥರ ವಿಶ್ವಾಸ ಗಳಿಸುತ್ತಿದ್ದ. ಜತೆಗೆ ಮುಂಗಡ ಹಣವನ್ನೂ ನೀಡುತ್ತಿದ್ದ. ಬಾಕಿ ಉಳಿದ ಹಣಕ್ಕೆ ಆತ ನೀಡುತ್ತಿದ್ದ ಚೆಕ್‌ಗಳು ಬೌನ್ಸ್‌ ಆಗುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next