—
97 ಕೋಟಿ ರೂ. – 2021-22ರಲ್ಲಿನ ಒಟ್ಟು ವೆಚ್ಚ
28.5 ಕೋಟಿ ರೂ. – ದೇಶಿಯ ಪ್ರಯಾಣ
1.28 ಕೋಟಿ ರೂ. – ಅಂತಾರಾಷ್ಟ್ರೀಯ ಪ್ರಯಾಣ
57.6 ಕೋಟಿ ರೂ. – ವೇತನ
17 ಲಕ್ಷ ರೂ. – ವೈದ್ಯಕೀಯ ವೆಚ್ಚ
7.5 ಕೋಟಿ – ಕಚೇರಿಯ ಖರ್ಚು ವೆಚ್ಚ
1.2 ಕೋಟಿ ರೂ. – ಐಟಿ ಸೇವಾ ವೆಚ್ಚ
——————–
58.5 ಕೋಟಿ ರೂ. – 2022-23ನೇ ಸಾಲಿನ ವೇತನ
30.9 ಕೋಟಿ ರೂ – ದೇಶಿ ಪ್ರಯಾಣ
2.6 ಕೋಟಿ ರೂ. – ಅಂತಾರಾಷ್ಟ್ರೀಯ ಪ್ರಯಾಣ
65 ಲಕ್ಷ – ಆರೋಗ್ಯ ಸೇವೆ ಹಾಗೂ ಇತರೆ
7 ಕೋಟಿ ರೂ.- ಕಚೇರಿ ಸಂಬಂಧಿತ ವೆಚ್ಚ
1.5 ಕೋಟಿ ರೂ. -ಐಟಿ ಸೇವಾ ವೆಚ್ಚ
—
ಸಂಸದರ ಕಾರ್ಯಕ್ಷಮತೆ ಎಷ್ಟು ?
ಇತ್ತೀಚಿನ ವರ್ಷಗಳಲ್ಲಿ ಸದನಗಳಲ್ಲಿ ಚರ್ಚೆಗಿಂತಲೂ ಗದ್ದಲವೇ ಹೆಚ್ಚುತ್ತಿದ್ದು, ಅನೇಕ ಬಾರಿ ಕಲಾಪಗಳು ಕೊಚ್ಚಿಹೋಗಿರುವ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿನ ಉತ್ಪಾದಕತೆ ಎಷ್ಟು ಎಂಬುದನ್ನು ಗಮನಿಸಿದರೆ..
Advertisement
* 2021ರ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆ ಉತ್ಪಾದಕತೆ ಕೇವಲ ಶೇ.43ರಷ್ಟಿದ್ದರೆ, ಮುಂಗಾರಿನ ಅಧಿವೇಶನದಲ್ಲಿ ಶೇ.29 ಹಾಗೂ ಬಜೆಟ್ ಅಧಿವೇಶನದಲ್ಲಿ ಶೇ.90 ಇತ್ತು.* 2022ರಲ್ಲಿ ಚಳಿಗಾಲದ ಅಧಿವೇಶನದಲ್ಲಿ ಶೇ.94, ಮುಂಗಾರು ಅಧಿವೇಶನದಲ್ಲಿ ಶೇ.42 ಹಾಗೂ ಶೇ.90ರಷ್ಟು ಬಜೆಟ್ ಅಧಿವೇಶನ ಫಲಪ್ರದವಾಗಿದೆ.
* ಪ್ರಸಕ್ತ ವರ್ಷದ ಬಜೆಟ್ ಅಧಿವೇಶನದ ಉತ್ಪಾದಕತೆ ಶೇ.24ಕ್ಕಿಂತ ಕಡಿಮೆ