ನವದೆಹಲಿ : ತಮಿಳುನಾಡಿನಲ್ಲಿ 7 ವರ್ಷದ ಮಗುವನ್ನು ಅಪಹರಿಸಿ, ಹತ್ಯೆಗೈದಿರುವ ಅಪರಾಧಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ 20 ವರ್ಷಗಳ ಕಾಲ ಜೈಲು ಶಿಕ್ಷೆಯಾಗಿ ಮಾರ್ಪಾಡು ಮಾಡಿದೆ.
Advertisement
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠವು ಅಪರಾಧಿ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದೆ.
ಈ ವೇಳೆ, ಅಪರಾಧಿ ಎಸಗಿರುವ ಕೃತ್ಯದ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ,ಕೋರ್ಟ್‌ಗೆ ಸಲ್ಲಿಕೆಯಾದ ಅಫಿಡವಿಟ್‌ನಲ್ಲಿ ಅಪರಾಧಿಯ ವ್ಯಕ್ತಿತ್ವ ಮರೆಮಾಚಲಾಗಿದೆ. ಈ ಕುರಿತು ಸ್ಪಷ್ಟನೆ ಬೇಕಿದೆ ಎಂದು ತಿಳಿಸಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.