Advertisement

20 ಸಾವಿರ ಜನರಿಗೆ ನರೇಗಾದಡಿ ಕೆಲಸ

04:37 AM May 23, 2020 | Lakshmi GovindaRaj |

ಹನೂರು: ನರೇಗಾ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 20 ಸಾವಿರ ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ನರೇಂದ್ರ ತಿಳಿಸಿದರು.

Advertisement

ತಾಲೂಕಿನ ಗೋಪಿನಾಥಂ, ಮಲೆ  ಮಹದೇಶ್ವರ  ಬೆಟ್ಟ ಮತ್ತು ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಡಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಪ್ರತಿ  ಗ್ರಾಮಸ್ಥರಿಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ತಿಂಗಳಿಗೆ 11 ಕೋಟಿ ಕೂಲಿ: ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ 275 ರೂ. ಕೂಲಿ ನೀಡಲಾಗುತ್ತಿದ್ದು  ಕ್ಷೇತ್ರದಲ್ಲಿಯೇ ದಿನಕ್ಕೆ 37 ಲಕ್ಷ ಕೂಲಿ ಹಣ ನೀಡಲಾಗುತ್ತಿದೆ. ಕಾರ್ಮಿಕರು ಇದೇ ರೀತಿ  ಕಾರ್ಯನಿರ್ವಹಿಸಿದಲ್ಲಿ ತಿಂಗಳಿಗೆ 11 ಕೋಟಿ ಕೂಲಿ ಹಣ ಲಭಿಸಲಿದೆ. ಇದರಿಂದ ಗ್ರಾಮೀಣರು ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಆರ್ಥಿಕ ವಹಿವಾಟು ಕೂಡ ಹೆಚ್ಚಲಿದೆ ಎಂದು ಹೇಳಿದರು.

ಪಿಡಿಒಗಳಿಗೆ ಸೂಚನೆ: ಗೋಪಿನಾಥಂ,  ಮಲೆ  ಮಹದೇಶ್ವರ ಬೆಟ್ಟ, ಪೊನ್ನಾಚಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿದರು. ಬಳಿಕ ಪುದೂರು ಕೆರೆ, ಕೀರನಹೊಲ ಕೆರೆ ಮತ್ತು ರಾಮೇಗೌಡನಹಳ್ಳಿ ಕೆರೆ ಅಭಿವೃದ್ದಿ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಪಂ  ಸದಸ್ಯ ಬಸವರಾಜು, ಗ್ರಾಪಂ ಅಧ್ಯಕ್ಷರಾದ ಮುರುಗೇಶ್‌, ರುಕ್ಮಿಣಿ, ಶಿವಬಸಪ್ಪ, ಪಿಡಿಒಗಳಾದ ಕಿರಣ್‌, ಪ್ರದೀಪ್‌, ರಾಜ್‌ಕುಮಾರ್‌, ಈಶ್ವರ್‌, ಬಸಪ್ಪನದೊಡ್ಡಿ ಪ್ರಸಾದ್‌, ಹನುಮಂತು, ರಾಜು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next