Advertisement

ಮೈತ್ರಿ ಸೀಟು ಹಂಚಿಕೆ ಪೂರ್ಣ ; 20 ಕೈಗೆ , 8 ಕ್ಷೇತ್ರ ಜೆಡಿಎಸ್‌ಗೆ 

03:55 PM Mar 13, 2019 | Team Udayavani |

ಹೊಸದಿಲ್ಲಿ : ತೀವ್ರ ಕಗ್ಗಂಟಾಗಿದ್ದ ಲೋಕಸಭಾ  ಸೀಟು ಹಂಚಿಕೆಯನ್ನು ಕಾಂಗ್ರೆಸ್‌-ಜೆಡಿಎಸ್‌ ಕೊನೆಗೂಳಿಸಿದ್ದು, 8 ಕ್ಷೇತ್ರಗಳನ್ನು ಜೆಡಿಎಸ್‌ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆ. 

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಜೊತೆ ಮಾತು ಕತೆ ನಡೆಸಿ ಸೀಟು ಹಂಚಿಕೆ ಪೂರ್ಣ ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು(ಹಾಲಿ ಕಾಂಗ್ರೆಸ್‌ ಸಂಸದ), ಹಾಸನ, ಮಂಡ್ಯ, ಬೆಂಗಳೂರು ಉತ್ತರ, ವಿಜಯಪುರ ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ.  ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ  ಮೈಸೂರು ಕ್ಷೇತ್ರ ಕೊನೆಗೂ ಕಾಂಗ್ರೆಸ್ಸಿಗೆ ಸಿಕ್ಕಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next