Advertisement
ಕೆ.ಆರ್.ಪೇಟೆಯ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ದೇವೇಗೌಡ ಕುಟುಂಬದ ವಿರುದ್ಧ ಹರಿಹಾಯ್ದರು. ನಿಖಿಲ್ ಸ್ಪರ್ಧೆಗೆ ಒಂದು ರೀತಿಯಲ್ಲಿ ನಾವೂ ಕಾರಣ. ಆದರೆ, ಸಿಎಂ ಆಗಿದ್ದ ಕುಮಾರಸ್ವಾಮಿ ಹೇಳಿದ ಸುಳ್ಳುಗಳೇ ನಿಖಿಲ್ ಸೋಲಿಗೆ ಕಾರಣವಾದವು. ನಮಗೆ ಈ ಸ್ಥಿತಿ ಬರಲು ಕೂಡ ಅವರ ಸುಳ್ಳುಗಳೇ ಕಾರಣ.
Related Articles
Advertisement
ರೇವಣ್ಣ ಏನೂಂತ ಗುತ್ತಿಗೆದಾರರಿಗೆ ಗೊತ್ತು: ಎಚ್.ಡಿ.ರೇವಣ್ಣ 17 ಶಾಸಕರಿಗೆ ಕೊಟ್ಟ ಕಿರುಕುಳವೇ ಸಮ್ಮಿಶ್ರ ಸರ್ಕಾರ ಉರುಳುವುದಕ್ಕೆ ಕಾರಣ. ಎಲ್ಲಾ ಇಲಾಖೆಯಲ್ಲೂ ಅವರು ಹಸ್ತಕ್ಷೇಪ ಮಾಡುತ್ತಿದ್ದುದರಿಂದಲೇ ಬೇಸತ್ತು ಶಾಸಕರು ಹೊರ ಬಂದಿದ್ದಾಾರೆ ಎಂದರು. “ನನ್ನನ್ನು ಚಂಗಲು’ ಎಂದು ರೇವಣ್ಣ ಜರಿದಿದ್ದಾರೆ. ಹಾಗಿದ್ದ ಮೇಲೆ ನನ್ನಂತಹ ವ್ಯಕ್ತಿಯಿಂದ ಅವರು ಏಕೆ ಸಹಕಾರ ತೆಗೆದುಕೊಂಡರು?. ಹಾಸನದಲ್ಲಿ ರೇವಣ್ಣ ಕೂಡ ಹೋಟೆಲ್ ಮಾಡಿದ್ದಾರೆ. ಅವರ ಹೋಟೆಲ್‌ನಲ್ಲಿ ನಾನೂ ಒಂದೂವರೆ ವರ್ಷ ದುಡಿದಿದ್ದೇನೆ. ಹೊಟ್ಟೆ-ಬಟ್ಟೆಗಾಗಿ ಮುಂಬೈಗೆ ಹೋದವನು ನಾನು. ಹಗಲು-ರಾತ್ರಿ ದುಡಿದು ಸಮಾಜಸೇವಕನಾಗಿದ್ದೇನೆ. ರೇವಣ್ಣ ಏನೂ ಅಂತ ಕರ್ನಾಟಕದ ಎಲ್ಲಾಾ ಕಾಂಟ್ರಾಕ್ಟರ್ಸ್‍ಗೆ ಗೊತ್ತು ಎಂದರು.
ಡಿಕೆಶಿ ಕಾಲಿಗೆ ಬಿದ್ದಿದ್ದೆ: ಸಿದ್ದರಾಮಯ್ಯನವರು ಸಾಹುಕಾರ್ ಚನ್ನಯ್ಯ ನಾಲೆಯನ್ನು 4 ತಾಲೂಕಿಗೆ ಕೊಟ್ಟು 840 ಕೋಟಿ ರೂ.ಬಿಡುಗಡೆ ಮಾಡಿದ್ದರು. ರೇವಣ್ಣನವರು, ಅಲ್ಲಿನ ಚೀಫ್ ಇಂಜಿನಿಯರ್‌ನ್ನು ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನಾಾಗಿ ಮಾಡಿದರು. ಇದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಮುನಿಸಿಕೊಂಡಿದ್ದರು. ನಾನು ಅವರ ಕಾಲು ಮುಟ್ಟಿ ಸಮಾಧಾನ ಮಾಡಿದ್ದೆ. ಸರ್ಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದೆ’ ಎಂದು ಹೇಳಿದರು. “ನನ್ನ ತಾಲೂಕಿಗೆ ಕೊಟ್ಟಿರೋದು 50 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರಿಂದ 200 ಕೋಟಿ ರೂ.ಅಪ್ರೂವಲ್ ಮಾಡಿಸಿದೆ. 64 ಮತ್ತು 54ನೇ ನಾಲೆಗೆ ಮಂಜೂರು ತಂದೆ. ಆದರೆ, ಅದನ್ನು ರೇವಣ್ಣ ಕಿತ್ತುಕೊಂಡರು’ ಎಂದು ಟೀಕಿಸಿದರು.
ಡಿಕೆಶಿ ಕಷ್ಟಕ್ಕೆ ಕುಟುಂಬ ಸ್ಪಂದಿಸುತ್ತಿಲ್ಲವೇಕೆ?: ಡಿಕೆಶಿಯವರು ಇ.ಡಿ ಸಂಕಷ್ಟ ಎದುರಿಸಲು ಯಾರು ಕಾರಣ ಎನ್ನುವುದು ಸಂದರ್ಭ ಬಂದಾಗ ಗೊತ್ತಾಗುತ್ತೆ. ಶಿವಕುಮಾರ್ ಬಂಧನದ ಹಿಂದೆ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಇಲ್ಲವೇ ಇಲ್ಲ. ಕಬ್ಬಿಣವನ್ನು ಕಬ್ಬಿಣದಿಂದಲೇ ಬಡಿಯಬೇಕು ಎಂದು 6 ವರ್ಷದಿಂದ ಅವರ ವಿರುದ್ಧ ಪಿತೂರಿ ನಡೆಯುತ್ತಿತ್ತು. ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅಳಿಯನನ್ನು ಬೆಳೆಯೋಕೆ ಬಿಡಬಾರದೆಂಬ ಉದ್ದೇಶ ಇದರ ಹಿಂದೆ ಅಡಗಿತ್ತು. ದೇವೇಗೌಡರ ಕುಟುಂಬದ ಎದುರು ಸಮುದಾಯದ ನಾಯಕರು ಬೆಳೆಯಬಾರದು. ಯಾರೂ ದೊಡ್ಡವರಾಗಿರಬಾರದು ಎಂಬುದು ಅವರ ಬಯಕೆ. ಇದು ಸುಳ್ಳಾಾಗಿದ್ದರೆ ಡಿ.ಕೆ.ಶಿವಕುಮಾರ್ ಕಷ್ಟಕ್ಕೆ ದೇವೇಗೌಡರ ಕುಟುಂಬ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ನಾನು ಒಕ್ಕಲಿಗನಾಗಿ ಹುಟ್ಟಬಾರದಿತ್ತು ಎಂದು ದೇವೇಗೌಡರು ನೂರಾರು ಬಾರಿ ಹೇಳಿದ್ದಾರೆ. ಆದರೆ, ಪ್ರಧಾನಿ ಪಟ್ಟಕ್ಕೆ ಗೌಡರನ್ನು ಕೂರಿಸಿದವರು ಒಕ್ಕಲಿಗರೇ ಎನ್ನುವುದನ್ನು ಅವರು ಮರೆಯಬಾರದು. ಒಕ್ಕಲಿಗರು ಅವರನ್ನು ಪೂಜಿಸಿದರು. ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಾಡಲು ಮನೆ, ಮನೆಯಿಂದ ಹಣ ಸಂಗ್ರಹ ಮಾಡಿದರು. ಜನರಿಗೆ ಇನ್ನೂ ಅವರ ಬಗ್ಗೆ ಗೌರವವಿದೆ. ಅದನ್ನವರು ಉಳಿಸಿಕೊಳ್ಳಬೇಕು.-ಕೆ.ಸಿ.ನಾರಾಯಣಗೌಡ, ಅನರ್ಹ ಶಾಸಕ