ಬೆಂಗಳೂರು : ರಾಜ್ಯದ 12 ಜಿಲ್ಲೆಗಳ 20 ಸ್ಥಾನಗಳ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ದಿನಾಂಕ ನಿಗದಿ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇದನ್ನೂ ಓದಿ : ದೇಶದ ಶೇ.60ರಷ್ಟು ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ : ಕೇಂದ್ರದ ವಿರುದ್ಧ ರಾಹುಲ್ ಸಿಡಿ
ಅದರಂತೆ, ಸೆ.3 ರಂದು ಚುನಾವಣೆ ನಡೆಯಲಿದ್ದು, ಸೆ.6ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಸಂಬಂಧ ಆ.16ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅದೇ ದಿನದಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಬಾಗಲಕೋಟೆ, ಕೊಡಗು, ಉತ್ತರ ಕನ್ನಡ, ಬೀದರ್, ಕೋಲಾರ, ದಾವಣಗೆರೆ, ಬೆಳಗಾವಿ, ಕೊಪ್ಪಳ, ಗದಗ, ರಾಮನಗರ, ವಿಜಯಪುರ ಜಿಲ್ಲೆಗಳ 20 ನಗರ ಸ‍್ಥಳೀಯ ಸಂಸ್ಥೆಗಳ ಉಪಚುನಾವಣೆ ಬರುವ ಸಪ್ಟೆಂಬರ್ 3 ರಂದು ನಡೆಯಲಿದೆ.
ಇದನ್ನೂ ಓದಿ : ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ : ಹೆಜಮಾಡಿಯಲ್ಲಿ ಅದ್ದೂರಿಯ ಸ್ವಾಗತ