Advertisement

ಕೋವಿಡ್ 19 ತಡೆಗೆ ಇನ್ಫೋಸಿಸ್‌ ಪ್ರತಿಷ್ಠಾನದಿಂದ 20 ಲಕ್ಷ ರೂ.

12:44 PM Mar 29, 2020 | Team Udayavani |

ಧಾರವಾಡ : ಕೋವಿಡ್ 19 ಸಂಕಷ್ಟ ನಿಯಂತ್ರಣಕ್ಕಾಗಿ ಮತ್ತು ಅಗತ್ಯ ಸೌಲಭ್ಯ ಒದಗಿಸಲು ಇನ್ಫೋಸಿಸ್‌ ಫೌಂಡೇಶನ್‌ ಮುಂದಾಗಿದ್ದು ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿಗೆ ಸೇರಿ ಒಟ್ಟು 20 ಲಕ್ಷ ರೂ. ನೆರವು ನೀಡಿದೆ.

Advertisement

ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಕೋವಿಡ್ 19  ತಡೆಗೆ ಹರಸಾಹಸ ಪಡುತ್ತಿರುವ ಸಿಬ್ಬಂದಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಹೆಚ್ಚು ಒತ್ತು ನೀಡಲು ಮುಂದಾಗಿದ್ದು, ಧಾರವಾಡದ ಸಾಫಲ್ಯ ಪ್ರತಿಷ್ಠಾನ ಮತ್ತು ಗ್ರಾಮ ವಿಕಾಸ ಸೊಸೈಟಿ ಮೂಲಕ ಪರಿಹಾರ ಸಾಮಗ್ರಿ ವಿತರಿಸಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಅವಳಿ-ನಗರ ಸೇರಿದಂತೆ ಧಾರವಾಡ ಜಿಲ್ಲೆ ಹಾಗೂ ಶಿಗ್ಗಾವಿ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರಾಡಳಿತ ಸಂಸ್ಥೆಗಳ ಸ್ವತ್ಛತಾ ಕರ್ಮಿಗಳಿಗೆ 20 ಸಾವಿರ ಮಾಸ್ಕ್ ಮತ್ತು ಪ್ರತಿಯೊಬ್ಬರಿಗೆ ವೈಯಕ್ತಿಕ ಉಪಯೋಗಕ್ಕಾಗಿ ಸ್ಯಾನಿಟೈಜರ್‌ ಬಾಟಲಿ ಹಂಚಲಾಗುವುದು. ವೈದ್ಯಕೀಯ ಸಿಬ್ಬಂದಿಗೆ ಉನ್ನತ ಮಟ್ಟದ ಎನ್‌-95 ಮಾಸ್ಕ್ ಮತ್ತು ಸ್ಯಾನಿಟೈಜರ್‌ ಒದಗಿಸಲಾಗುವುದು. ಧಾರವಾಡ ನಗರ ಹಾಗೂ ಹುಬ್ಬಳ್ಳಿಯ ಗೋಕುಲ ಸುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಗೋಸಾವಿ, ಹರಿಣಶಿಕಾರಿ,ಕೊಂಚಿಕೊರವ ಸಮಾಜದ ಬಡ ಕುಟುಂಬಗಳಿಗೆ 10 ದಿನಗಳಿಗೆ ಆಗುವಷ್ಟು ದಿನಸಿ ಸಾಮಾಗ್ರಿಗಳನ್ನು ಕೂಡ ಒದಗಿಸಲು ಉದ್ದೇಶಿಸಲಾಗಿದೆ.

ಹಿರಿಯ ನ್ಯಾಯವಾದಿ ಅರುಣ ಜೋಶಿ, ಮೃಣಾಲ ಜೋಶಿ, ಜಗದೀಶ ನಾಯ್ಕ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಪ್ರಯತ್ನದಿಂದ ಈ ನೆರವು ದೊರೆತಿದ್ದು, ಶೀಘ್ರವೇ ಈ ಕಾರ್ಯಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್‌ ನೇತೃತ್ವದಲ್ಲಿ ನಿರ್ವಹಿಸಲಾಗುವುದು ಎಂದು ಅರುಣ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next