Advertisement

ಐದು ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ; ಎಚ್‌.ಎಂ. ಶ್ರೀನಿವಾಸ

03:06 PM Jan 21, 2021 | Team Udayavani |

ಕಲಬುರಗಿ: ದೇಶದಲ್ಲಿ ಬಂಡವಾಳ ಹೂಡಿಕೆಗೆ ಸ್ಪರ್ಧೆ ಏರ್ಪಟ್ಟಿದೆ. ಸಂಪನ್ಮೂಲ ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಿದರೆ ಹೆಚ್ಚು ಉದ್ಯೋಗ
ಸೃಷ್ಟಿಸಬಹುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಎಚ್‌.ಎಂ. ಶ್ರೀನಿವಾಸ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಜಾರಿಗೊಳಿಸಲಾದ ಪರಿಣಾಮಕಾರಿ ಮತ್ತು ಹಲವು ಸುಧಾರಣೆಗಳನ್ನು ಒಳಗೊಂಡ ಹೊಸ ಕೈಗಾರಿಕಾ ನೀತಿ ರಾಜ್ಯ ಉನ್ನತ ಮಟ್ಟದ ಕೈಗಾರಿಕಾ ಕಾರ್ಯಕ್ಷಮತೆ ಶ್ರೇಣಿ ಸಾಧಿಸಲು ಸಹಾಯಕವಾಗಲಿದೆ. ಮುಂದಿನ ಐದು ವರ್ಷದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ಮೂರು ಕೈಗಾರಿಕಾ ವಲಯಗಳೆಂದು ವಿಂಗಡಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳು ವಲಯ-1ರ ವ್ಯಾಪ್ತಿಗೆ ಒಳಪಟ್ಟಿವೆ.
ವಲಯ-1ರಲ್ಲಿ ಒಟ್ಟು 152 ತಾಲೂಕುಗಳನ್ನು ಅತಿ ಹಿಂದುಳಿದ ಪ್ರದೇಶಗಳೆಂದು ಗುರುತಿಸಲಾಗಿದೆ. ವಲಯ-2ರಲ್ಲಿ 78 ಹಿಂದುಳಿದ ತಾಲೂಕುಗಳಿದ್ದು,
ವಲಯ-3ರಲ್ಲಿ ಒಂಭತ್ತು ತಾಲೂಕುಗಳು ಮುಂದುವರೆದವುಗಳಾಗಿವೆ ಎಂದರು.

ಕೆಎಸ್‌ಎಫ್‌ಸಿ ಸಾಲಗಳಿಗೆ ಬಡ್ಡಿಯನ್ನು ಶೇ.6ಕ್ಕೆ ಇಳಿಸುವುದು ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಿದೆ. ಕೆಐಎಡಿಬಿ ಕೈಗಾರಿಕಾ
ಪ್ರದೇಶಗಳಲ್ಲಿ ಎಂಎಸ್‌ಎಂಇಗಳಿಗಾಗಿ ಶೇ.30 ನಿವೇಶನಗಳ ಮೀಸಲಾತಿ, ವಿದ್ಯುತ್‌ ತೆರಿಗೆ ಮನ್ನಾ, ಖಾಸಗಿ ವಲಯದಲ್ಲಿ ಕೈಗಾರಿಕಾ ಪಾರ್ಕ್‌ಗಳು,
ಟೈರ್‌-2 ಮತ್ತು ಟೈರ್‌-3 ನಗರಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆ ಮಾಡಲಾಗುವುದು ಎಂದು ವಿವರಿಸಿದರು.

Advertisement

ತಂತ್ರಜ್ಞಾನ ಮತ್ತು ರಫ್ತು ಸಂಬಂಧಿತ ಕೈಗಾರಿಕೆ ಗಳಿಗೆ ಧನ ಸಹಾಯ, ಕೈಗಾರಿಕೆ ಉದ್ದೇಶಕ್ಕಾಗಿ ನಗರ ಮತ್ತು ಗ್ರಾಮೀಣ ಕಾನೂನುಗಳ ಸರಳೀಕರಣ,
ಹೊಸ ತಂತ್ರಜ್ಞಾನ ಅಳವಡಿಕೆ ಪ್ಯಾಕೇಜ್‌, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ತ್ಯಾಜ್ಯ ಘಟಕ ಸ್ಥಾಪನೆಗೆ ಅನುದಾನ, ಎಲೆಕ್ಟ್ರಿಕಲ್‌ ಹಾಗೂ
ಪ್ಲಾಸ್ಟಿಕ್‌ ಮರುಬಳಕೆಗೆ ಸರ್ಕಾರ ಅನುದಾನ, ದೇಶಿಯ ವಸ್ತುಗಳು ವಿದೇಶಕ್ಕೆ ರಫ್ತು ಆರ್ಥಿಕತೆ ವೃದ್ಧಿ, ಕಾರ್ಯಕ್ಷಮತೆ ನೋಡಿ ಸಬ್ಸಿಡಿ ಹಾಗೂ
ಕರಕುಶಲಕರ್ಮಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್‌ ರಘೋಜಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಸತಿಶಕುಮಾರ ಬಿ., ಸಹಾಯಕ ನಿರ್ದೇಶಕ ಮುಕುಂದ ರೆಡ್ಡಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ, ಕಾಸಿಯಾ ಪದಾಧಿಕಾರಿಗಳಾದ ಭೀಮಾಶಂಕರ ಪಾಟೀಲ, ಎನ್‌.ಆರ್‌. ಜಗದೀಶ, ಪಿ.ಎನ್‌. ಜೈಕುಮಾರ, ಎಸ್‌. ಶಂಕರನ್‌, ಎಚ್‌ ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಶಶಿಕಾಂತ ಪಾಟೀಲ, ದಾಲ್‌ಮಿಲ್ಲರ್ ಸಂಘದ ಶರಣಬಸಪ್ಪ ಪಾಟೀಲ, ಚಂದ್ರಶೇಖರ ತಳ್ಳಳ್ಳಿ, ಬಸವರಾಜ ಪಾಟೀಲ, ಶರಣಪ್ಪ ಮಾನೇಗಾರ್‌, ನಂದಿಕೋಲ ಮಠ, ಮುಕ್ತಾ ರವಿಕುಮಾರ ಹಾಗೂ ಇನ್ನಿತರ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

ನೀರು ಉಳಿಕೆಗೆ ಪ್ರೋತ್ಸಾಹ ಧನ ನೀರಿನ ಅಭಾವ ಮತ್ತು ಸಮಸ್ಯೆ ತಪ್ಪಿಸುವುದು ಹಾಗೂ ನೀರಿನ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ
ಕೈಗಾರಿಕೆಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಧನವನ್ನು ನೂತನ ಕೈಗಾರಿಕಾ ನೀತಿ ಕಲ್ಪಿಸಲಿದೆ ಎಂದು ಅಪರ ನಿರ್ದೇಶಕ ಎಚ್‌.ಎಂ. ಶ್ರೀನಿವಾಸ ಹೇಳಿದರು.
ಕಲ್ಯಾಣ ಕರ್ನಾಟಕದಂತ ಭಾಗದಲ್ಲಿ ಒಮ್ಮೆ ಅ ಧಿಕ ಮಳೆ ಮತ್ತು ಒಮ್ಮೊಮೆ ಕಡಿಮೆ ಮಳೆಯಿಂದ ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ನೀರಿನ ಮರು ಬಳಕೆ, ಮಳೆ ನೀರು ಕೊಯ್ಲು ಅಳವಡಿಕೆ, ಶುದ್ಧೀಕರಣ ಘಟಕ ಹೊಂದಿದ ಕೈಗಾರಿಕೆಗಳಿಗೆ ಹೊಸ ನೀತಿಯಡಿ ಪ್ರೋತ್ಸಾಹ ಧನ ಸಿಗಲಿದೆ. ಔಷಧಿ ತಯಾರಿಕೆ ಕೈಗಾರಿಕೆಗಳು ತಮ್ಮ ನೀರನ್ನು ಹೊರಗೆ ಬಿಡುಗಡೆ ಮಾಡದೆ ಇದ್ದರೆ ಪ್ರೋತ್ಸಾಹ ಧನ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next