Advertisement

ಜಿಲ್ಲೆಯಲ್ಲಿ 20 ಕೆ.ಎಲ್‌ ಆಕ್ಸಿಜನ್‌ ಸಂಗ್ರಹ

05:42 PM May 08, 2021 | Team Udayavani |

ಬಾಗಲಕೋಟೆ: ಕೊರೊನಾ 2ನೇ ಅಲೆಯಿಂದ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಮೂರು ದಿನಗಳಿಗೆ ಆಗುವಷ್ಟು ಅಗತ್ಯವಿರುವ 20 ಕೆ.ಎಲ್‌ ಆಕ್ಸಿಜನ್‌ ಸಂಗ್ರಹಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್‌ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ವಿವಿಧ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಗೆ ಈಗಾಗಲೇ 15 ಕೆ.ಎಲ್‌ ಆಕ್ಸಿಜನ್‌ ಬಂದಿದ್ದು, ಹೆಚ್ಚುವರಿಯಾಗಿ ಇನ್ನು 15 ಕೆ.ಎಲ್‌ ಆಕ್ಸಿಜನ್‌ ಬರಲಿದೆ. ಜಿಲ್ಲೆಯ ಸಿಮೆಂಟ್‌ ಕಾರ್ಖಾನೆಗಳವರು ಆಕ್ಸಿಜನ್‌ ಸಿಲೆಂಡರ್‌ ನೀಡುತ್ತಿದ್ದಾರೆ. ಅಲ್ಲದೇ ಎಂಎಸ್‌ಪಿಎಲ್‌ನಿಂದ ಬಾಗಲಕೋಟೆ, ಬೆಳಗಾವಿ ಜಿಲ್ಲೆ ಸೇರಿ ಒಟ್ಟು 80 ಜೆಂಬೋ ಸಿಲೆಂಡರ್‌ಗಳನ್ನು ಪ್ರತಿ ದಿನ ನೀಡಲು ಒಪ್ಪಿರುವುದಾಗಿ ಕಾರಜೋಳ ಹೇಳಿದರು.

3570 ವಲಸಿಗರು ಆಗಮನ: ಜಿಲ್ಲೆಯ ಬಾದಾಮಿ, ಹುನಗುಂದ ಹಾಗೂ ಗುಳೇದಗುಡ್ಡ ತಾಲೂಕುಗಳಲ್ಲಿ 3570 ವಲಸೆ ಕಾರ್ಮಿಕರು ಆಗಮಿಸಿದ್ದು, ಅವರಿಗೆಲ್ಲ ಔಷಧ ಕಿಟ್‌ ನೀಡಲಾಗಿದೆ. 2700 ಕಾರ್ಮಿಕರಿಗೆ ಜಾಬ್‌ ಕಾರ್ಡ್‌ ನೀಡಲಾಗಿದೆ. ಅಲ್ಲದೇ ಉದ್ಯೋಗ ಖಾತ್ರಿಯಡಿ ಉದ್ಯೋಗ ಸಹ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದ್ದು, ಹೋಮ್‌ ಕ್ವಾರಂಟೈನ್‌ಗೆ ಬಳಕೆ ಮಾಡಲು ತಿಳಿಸಿದರು. ಸಣ್ಣ ಕುಟುಂಬದಲ್ಲಿ ಒಂದೇ ಶೌಚಾಲಯ, ಸ್ನಾನಗೃಹ ಹೊಂದಿದವರ ಮನೆಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾದಲ್ಲಿ ಅಂತವರನ್ನು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಜಿಲ್ಲೆಗೆ ಹೊಸ ಆರ್‌ಟಿಪಿಸಿಆರ್‌ ಯಂತ್ರ: ಕೋವಿಡ್‌ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಯ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಹೆಚ್ಚುವರಿಯಾಗಿ ಮತ್ತೂಂದು ಆರ್‌ಟಿ.ಪಿಸಿಆರ್‌ ಹಾಗೂ ಎ.ಎಂ.ಆರ್‌ ಎಕ್ಸ್‌ಟ್ರಾಕ್ಟರ್‌ ಯಂತ್ರ ಬರಲಿದೆ. ಇದರಿಂದ ಈಗಿರುವ ಸ್ಯಾಂಪಲ್‌ಗ‌ಳ ಪರೀಕ್ಷೆಗಿಂತ ದಿನಕ್ಕೆ ಇನ್ನು ಹೆಚ್ಚಿನ ಪರೀಕ್ಷೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು. ಎನ್‌ಐಸಿ ಪೋರ್ಟಲ್‌ನಲ್ಲಿ ಬೆಡ್‌ಗಳ ಮಾಹಿತಿ: ಜಿಲ್ಲೆಯಲ್ಲಿ ಸದ್ಯ ಲಭ್ಯವಿರುವ ವಿವಿಧ ಸೌಲಭ್ಯಗಳಿರುವ ಬೆಡ್‌ಗಳ ಮಾಹಿತಿ ಜಠಿಠಿಟ:// ಚಿಚಜಚlkಟಠಿ.nಜಿc.ಜಿn/ಚಿಜkಚಿಛಿಛಜಿnfಟ ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 343 ಜನರಲ್‌ ಬೆಡ್‌, 8 ಐಸಿ.ಯು ಬೆಡ್‌, 6 ಎಚ್‌ಡಿಯು ಬೆಡ್‌, 6 ಆಕ್ಸಿಜನ್‌ ಬೆಡ್‌ ಸೇರಿ ಒಟ್ಟು 363 ಬೆಡ್‌ಗಳು ಖಾಲಿ ಇವೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ 135 ರಿಂದ 240ಕ್ಕೆ ಆಕ್ಸಿಜನ್‌ ಬೆಡ್‌ ಗಳು ಸಿದ್ಧಗೊಳ್ಳುತ್ತಿರುವ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

ಬೆಡ್‌ಗಳ ನಿರ್ವಹಣೆಗೆ ಜಿಲ್ಲಾಡಳಿತದಿಂದ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಿವಿದ ಸೌಲಭ್ಯಗಳ ಬೆಡ್‌ಗಳ ಮಾಹಿತಿಯನ್ನು ವೆಬ್‌ ಪೋರ್ಟಲ್‌ ಮೂಲಕ ಕ್ಷಣಕ್ಷಣಕ್ಕೂ ಸಾರ್ವಜನಿಕರು ಪಡೆಯಬಹುದಾಗಿದೆ ಎಂದರು. ಡಿಸಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಪ್ರತಿದಿನ 120 ರಿಂದ 130 ವರೆಗೆ ರೆಮ್‌ಡಿಸಿವಿಯರ್‌ ಚುಚ್ಚುಮದ್ದು ಅವಶ್ಯವಿದ್ದು, ಈಗಾಗಲೇ ಮಾ. 15ರಿಂದ ಇಲ್ಲಿಯವರೆಗೆ 2987 ಚುಚ್ಚುಮದ್ದು ಸ್ವೀಕೃತಿಯಾದರೆ ಅದರ ಪೈಕಿ 2955 ಉಪಯೋಗಿಸಲಾಗಿದೆ.

Advertisement

32 ಚುಚ್ಚುಮದ್ದು ಮಾತ್ರ ಲಭ್ಯ ಇವೆ. ಪ್ರತಿದಿನ 500 ರೆಮಿಡಿಸ್ವಿಯರ್‌ ಬೇಡಿಕೆ ಇದ್ದು, ಏ. 22ರಿಂದ ಇಲ್ಲಿಯವರೆಗೆ 3179 ರೆಮ್‌ಡೆಸಿವಿಯರ್‌ ಪೂರೈಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ 18 ರೆಮ್‌ಡೆಸಿವಿಯರ್‌ ಲಭ್ಯವಿದ್ದು, ಅಗತ್ಯ ರೋಗಿಗಳಿಗೆ ಮಾತ್ರ ಬಳಸಲು ಸೂಚಿಸಲಾಗಿದೆ ಎಂದು ತಿಳಿಸಿದರು. 73 ಲಕ್ಷ ದಂಡ ವಸೂಲಿ: ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿ ಸಿದ 76014 ಜನರಿಂದ ಒಟ್ಟು 7311289 ರೂ. ಗಳ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ 28 ಮದುವೆಗಳಿಗೆ ಪ್ರಕರಣದ ದಾಖಲಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡುವ ವರ್ತಕರ ವಿರುದ್ದ ವಿಶೇಷ ತಂಡದ ಮೂಲಕ 16 ಕಡೆ ದಾಳಿ ಮಾಡಿ 53,500 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಓ ಟಿ.ಭೂಬಾಲನ್‌, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಳ್ಳೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌.ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ, ಎನ್‌ಐಸಿಯ ಗಿರಿಯಾಚಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next