Advertisement

ನಕಲಿ ಸರ್ಟಿಫಿಕೇಟ್‌ನಿಂದ ಸರಕಾರಿ ಉದ್ಯೋಗ: 20 ಮಂದಿ ಉಚ್ಚಾಟನೆ

11:25 AM Mar 01, 2019 | udayavani editorial |

ಬೀಡ್‌ , ಮಹಾರಾಷ್ಟ್ರ : ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆಂದು ಮೀಸಲಿರುವ ವರ್ಗದಡಿ ಖೋಟಾ ಸರ್ಟಿಫಿಕೇಟ್‌ ನೀಡಿ ಉದ್ಯೋಗ ಪಡೆದಿದ್ದ ಬೀಡ್‌ ಜಿಲ್ಲಾ ಸರಕಾರಿ ಆಸ್ಪತ್ರೆಯ 20 ಮಂದಿ ನೌಕರರನ್ನು ಇಂದು ಶುಕ್ರವಾರ ಮಾರ್ಚ್‌ 1ರಿಂದ ಜಾರಿಗೆ ಬರುವಂತೆ ಕೆಲಸದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಉದ್ಯೋಗದಿಂದ ಉಚ್ಚಾಟಿತರಾಗಿರುವ ಇಪ್ಪತ್ತು  ಮಂದಿಯಲ್ಲಿ ಮಹಿಳೆಯರೂ ಸೇರಿದ್ದಾರೆ. ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಮ್ಯಾಟ್‌) ಕಳೆದ ವರ್ಷ ನೀಡಿದ್ದ ತೀರ್ಪಿನ ಪ್ರಕಾರ ಸರಕಾರದಿಂದ ಉಚ್ಚಾಟನೆ ಆದೇಶ ಹೊರಟು ಬಂತು. 

ಉದ್ಯೋಗದಿಂದ ಉಚ್ಚಾಟನೆಗೊಂಡಿರುವ 20 ನೌಕರರಲ್ಲಿ ಹದಿನೇಳು ಮಂದಿ ನಾಲ್ಕನೇ ವರ್ಗದ ಮತ್ತು ಮೂವರು ನೌಕರರು ಮೂರನೇ ವರ್ಗದ ನೌಕರರಾಗಿ ದುಡಿಯುತ್ತಿದ್ದರು; ಇವರ ಉಚ್ಚಾಟನೆ ಆದೇಶವನ್ನು ಸರಕಾರ ನಿನ್ನೆ ಗುರುವಾರ ಹೊರಡಿಸಿತ್ತು. ಇದು ಮಾರ್ಚ್‌ 1ರಿಂದ ಅದು ಜಾರಿಗೆ ಬಂತು ಎಂದು ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಅಶೋಕ್‌ ತೋರಟ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next