Advertisement
ಭಾನುವಾರ, ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಶಾಲೆಗಳು ಪುನಶ್ಚೇತನಕ್ಕಾಗಿ ಪ್ರತ್ಯೇಕ ಆ್ಯಪ್ ತಯಾರಿಸಲು ಉದ್ದೇಶಿಸಲಾಗಿದೆ.ಕನ್ನಡ ಸಾಹಿತ್ಯ ಮೌಲ್ಯಗಳನ್ನು ಉಳಿಸಲು ಕನ್ನಡ ಶಾಲೆಗಳ ಪುಶ್ಚೇತನವನ್ನು ಆದ್ಯತೆಯಾಗಿ ಕೆಲಸ ಮಾಡಬೇಕಿದೆ. ಚುನಾವಣೆ, ನೊಂದಣಿ ಆ್ಯಪ್ ತಯಾರಿಸಲು ಬೈಲಾ ತಿದ್ದುಪಡಿಯಂತೆ, ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಆ್ಯಪ್ ತಯಾರಿಸುವಂತೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರಿಗೆ ಸಲಹೆ ನೀಡಿರುವೆ ಎಂದ ಅವರು ಜಿಲ್ಲಾ, ತಾಲೂಕಾ ಹಾಗೂ ಹೋಬಳಿ ಘಟಕಗಳ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನದ ವಾಸ್ತವಿಕ ಸ್ಥಿತಿಗತಿಯನ್ನು ಆ್ಯಪ್ ಮೂಲಕ ಸಮೀಕ್ಷಿಸಿ, ವಿಸ್ತೃತ ವರದಿ ತಯಾರಿಸಿ ಸಕರ್ಾರಕ್ಕೆ ಸಲ್ಲಿಸಿ ಇಂತಿಷ್ಟು ಅವಧಿಯೊಳಗೆ ಅನುದಾನ ಬಿಡುಗಡೆ ಮಾಡಿ ಈ ಶಾಲೆಗಳ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವುದು ಮೊದಲಾದ್ಯತೆಯಾಗಿದೆ ಎಂದರು.
ಅದೇಷ್ಟೋ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಿರುವ ಗೊತ್ತುವಳಿಗಳು, ಗೊತ್ತುವಳಿಗಳಾಗಿ ಉಳಿದಿದ್ದು ಅನುಷ್ಠಾನಕ್ಕೆ ಬಂದಿಲ್ಲ. ಸಾಹಿತ್ಯ ಪರಿಷತ್ ಗೆ ಹೆಚ್ಚು ಪರಿಚಯವಿದ್ದವರು ಹೇಳಲಿ ಈ ಬಗ್ಗೆ ಹೇಳಲಿ ನೋಡೋಣ? ಎಂದವರು, ಇಲ್ಲಿಯವರೆಗೂ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಮಂಡನೆಯಾಗಿರುವ ಗೊತ್ತುವಳಿಗಳು ಅನುಷ್ಠಾನಗೊಂಡಿರುವ ಗೊತ್ತುವಳಿಗಳನ್ನು ಪ್ರತ್ಯೇಕಿಸಿ, ಅನುಷ್ಠಾನಕ್ಕೆ ಯೋಗ್ಯವಿರುವ ಗೊತ್ತುವಳಿಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು.ನಾಡು, ನುಡಿ, ಜಲ, ಗಡಿ ಇತ್ಯಾಧಿ ವಿಷಯಗಳ ಗೊತ್ತುವಳಿಗಳು ಹೋಬಳಿ ಸಮ್ಮೇಳನದಿಂದ ಅಖಿಲ ಭಾರತ ಸಮ್ಮೇಳನದವರೆಗೆ ಗೊತ್ತುವಳಿಗಳು ಅನುಷ್ಠಾನಗೊಳಿಸಬೇಕಿದ್ದು ಇಲ್ಲವಾದರೆ ಗೊತ್ತುವಳಿಗಳಿಗೆ ಅರ್ಥವೇ ಇರುವುದಿಲ್ಲ ಎಂದರು.
Related Articles
ಪರಿಷ್ಕೃತ ಬೈಲಾದಲ್ಲಿ ಗ್ರಂಥ ದಾಸೋಹ ಕಲ್ಪನೆ ಹಿನ್ನೆಲೆಯಲ್ಲಿ ತಾಲೂಕಾ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಯಾರದರೂ ಗ್ರಂಥ ದಾಸೋಹಕ್ಕೆ ನಿಧಿ ನೀಡಿದರೆ, ಗ್ರಂಥ ದಾನಿಗಳ ಭಾವಚಿತ್ರ ಮುದ್ರಿಸಿ ಪುಸ್ತಕ ಪ್ರಕಟಿಸಿ ಕಸಾಪ ಮೂಲಕ ಅರ್ಧ ಬೆಲೆಗೆ ಮಾರಾಟ ಮಾಡಲು ಸಾದ್ಯವಿದ್ದು ಓದುಗರಿಗೆ ಕಡಿಮೆ ಬೆಲೆಗೆ ಪುಸ್ತಕಗಳು ಲಭಿಸಲಿವೆ ಎಂದ ಅವರು ಖಾಸಗಿ ಪ್ರಕಾಶಕರಿಗೆ ಮೊರೆ ಹೋಗುವ ಪರಿಸ್ಥಿತಿ ಬರುವುದಿಲ್ಲ ಎಂದರು. ಕಸಾಪ ರಾಜ್ಯ ಘಟಕದ ಸಂಘ ಸಂಸ್ಥೆ ಪ್ರತಿನಿಧಿ ನಭಿಸಾಬ್ ಕುಷ್ಟಗಿ, ಮೋಹನಲಾಲ್ ಜೈನ್ ಮೊದಲಾದವರಿದ್ದರು.
Advertisement