ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ಆತಂಕ ಮುಂದುವರಿದಿದ್ದು, ಭಾನುವಾರ 20 ಮಂದಿಯಲ್ಲಿ ಪಾಸಿಟೀವ್ ಕಂಡು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 287ಕ್ಕೇರಿದೆ.
ಕೋಲಾರ ತಾಲೂಕಿನಲ್ಲಿ 11, ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ತಲಾ 3, ಕೆಜಿಎಫ್ 2, ಶ್ರೀನಿವಾಸಪುರದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಕೋಲಾರದ ಕಂಟೇನ್‌ಮೆಂಟ್ ಝೋನ್‌ನಿಂದ 30 ವರ್ಷದ ಪುರುಷ, 25, 26, 35 ವರ್ಷದ ಮಹಿಳೆ, ಪಿ.6907 ಸಂಪರ್ಕದಿಂದ 33 ವರ್ಷದ ಮಹಿಳೆ, ಪಿ.16761 ಸಂಪರ್ಕದಿಂದ 38 ವರ್ಷದ ಪುರುಷ, ಪಿ.18089 ಸಂಪರ್ಕದಿಂದ 25 ವರ್ಷದ ಮಹಿಳೆ, 48 ವರ್ಷದ ಮಹಿಳೆ, 21 ವರ್ಷದ ಪುರುಷ, ಉಸಿರಾಟದ ತೊಂದರೆಯಿಂದ 29 ವರ್ಷದ ಪುರುಷ, 20 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ.
ಬಂಗಾರಪೇಟೆ ತಾಲೂಕಿನಲ್ಲಿ ಪಿ.14433 ಸಂಪರ್ಕದಿಂದ 47 ವರ್ಷದ ಪುರುಷ, ಉಸಿರಾಟದ ತೊಂದರೆಯಿಂದ 11 ವರ್ಷದ ಬಾಲಕ, 47 ವರ್ಷದ ಪುರುಷ ಸೋಂಕಿತರಾಗಿದ್ದಾರೆ. ಮುಳಬಾಗಿಲು ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ 52 ವರ್ಷದ ಮಹಿಳೆ, ಅಂತರ ಜಿಲ್ಲಾ ಪ್ರಯಾಣದಿಂದ 41 ವರ್ಷದ ಪುರುಷ, 27 ವರ್ಷದ ಆರೋಗ್ಯ ಕಾರ್ಯಕರ್ತೆ ಸೋಂಕಿತರಾಗಿದ್ದಾರೆ. ಕೆಜಿಎಫ್‌ನಲ್ಲಿ ಉಸಿರಾಟದ ತೊಂದರೆಯಿಂದ 22 ವರ್ಷದ ಪುರುಷ, ಪಿ.19796 ಸಂಪರ್ಕದಿಂದ 48 ವರ್ಷದ ಮಹಿಳೆ ಹಾಗೂ ಶ್ರೀನಿವಾಸಪುರದಲ್ಲಿ ಉಸಿರಾಟದ ತೊಂದರೆಯಿಂದ 58 ವರ್ಷದ ಮಹಿಳೆ ಸೋಂಕಿತರಾಗಿದ್ದು, ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಭಾನುವಾರ 7 ಜನ ಸೇರಿ ಈವರೆಗೂ 124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 159 ಆಗಿದೆ. ತುರ್ತು ನಿಗಾ ಘಟಕದಲ್ಲಿ 11 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಸಾವು ಸಂಭವಿಸಿದ ನಂತರ ಎರಡು ಪ್ರಕರಣಗಳಲ್ಲಿ ಪಾಸಿಟೀವ್ ಎಂದು ದಾಖಲಾಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ 3565 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 16836 ಮಾದರಿ ಪರೀಕ್ಷಿಸಲಾಗಿದ್ದು, 14858 ನೆಗಟೀವ್ ಬಂದಿದೆ. ಕೋಲಾರದಿಂದ ಪಿ.8060, ಮಾಲೂರಿನಲ್ಲಿ ಪಿ.13262, ಪಿ.27024, ಕೆಜಿಎಫ್‌ನಲ್ಲಿ ಪಿ.19790, ಪಿ.21654, ಮುಳಬಾಗಿಲಿನಲ್ಲಿ ಪಿ.23545, ಶ್ರೀನಿವಾಸಪುರದಲ್ಲಿ ಪಿ.19799 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.