ಭೋಪಾಲ್: ರಾಜ್ಯದಲ್ಲಿ ಪಕ್ಷದ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದ ಬೆನ್ನಲ್ಲೇ 20 ಜನ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಮೂಲಕ ಕಳೆದ 15 ತಿಂಗಳ ಹಿಂದೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಪಮತಕ್ಕೆ ಕುಸಿದಿದೆ.
ಈ ನಡುವೆ ತನ್ನ ಸಚಿವ ಸಂಪುಟದಲ್ಲಿದ್ದ ಆರು ಜನ ಸಚಿವರನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಕಮಲನಾಥ್ ಅವರು ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ. ಇಮ್ರತೀ ದೇವಿ, ತುಳಸೀ ಸಿಲಾವಟ್, ಗೋವಿಂದ್ ಸಿಂಹ ರಜಪೂತ್, ಪ್ರದ್ಯುಮ್ನ ಸಿಂಹ ತೋಮರ್, ಡಾ. ಪ್ರಭುರಾಮ್ ಚೌಧರಿ, ಇವರೇ ಕಮಲನಾಥ್ ಸಂಪುಟದಿಂದ ವಜಾಗೊಂಡಿರುವ ಸಚಿವರಾಗಿದ್ದಾರೆ.
20 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆಯ ನಂತರ ಮಧ್ಯಪ್ರದೇಶ ವಿಧಾನ ಸಭೆಯ ಸಂಖ್ಯಾಬಲದ ಚಿತ್ರಣ ಈ ರೀತಿಯಾಗಿದೆ.
ಸದನದ ಒಟ್ಟು ಬಲ – 230
Related Articles
ಸದಸ್ಯರ ನಿಧನದಿಂದ ತೆರವಾಗಿರುವ ಸ್ಥಾನಗಳು – 02
ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ಮೊದಲು ಸದನ ಸದಸ್ಯ ಬಲ – 228
ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳು – 115
ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು – 20
ಸದ್ಯ ಸದನದ ಸದಸ್ಯ ಬಲ – 208
ಕಾಂಗ್ರೆಸ್ ಶಾಸಕರು – 114 – 20 = 94
ಬಿಜೆಪಿ ಶಾಸಕರು – 109
ಬಿ.ಎಸ್.ಪಿ. ಶಾಸಕರು – 02
ಸಮಾಜವಾದಿ ಪಕ್ಷದ ಶಾಸಕರು – 01
ಪಕ್ಷೇತರ ಶಾಸಕರು – 04
20 ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳು – 105 .