Advertisement

ರಾಯಬಾಗ ತಾಲೂಕಲ್ಲಿ 20 ಪ್ರಕರಣ

10:00 AM Jul 15, 2020 | Suhan S |

ರಾಯಬಾಗ: ಕೋವಿಡ್‌-19 ನಿಯಂತ್ರಣಕ್ಕೆ ಮಂಗಳವಾರದಿಂದ ಲಾಕ್‌ಡೌನ್‌ಗೆ ತಾಲೂಕಾಡಳಿತದ ನಿರ್ಧಾರದ ಮಧ್ಯೆಯೇ ಪಟ್ಟಣದಲ್ಲಿ 3 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ.

Advertisement

ಇದರಿಂದ ಜನರಲ್ಲಿ ಆತಂಕ ಹೆಚ್ಚಿದ್ದು, ಮೊದಲ ದಿನದ ಲಾಕ್‌ ಡೌನ್‌ ಸಂಪೂರ್ಣ ಯಶಸ್ವಿಯಾಗಿದೆ. ಬಸ್‌, ಬ್ಯಾಂಕ್‌, ಔಷಧ ಮತ್ತು ಹಾಲಿನ ಅಂಗಡಿಗಳು ಹೊರತುಪಡಿಸಿ ವ್ಯಾಪಾರ-ವಹಿವಾಟು ಬಂದ್‌ ಮಾಡಿದ್ದು, ಜನರ ಓಡಾಟ ವಿರಳವಾಗಿತ್ತು. ಮಂಗಳವಾರ ತಾಲೂಕಿನಲ್ಲಿ ಒಟ್ಟು 20 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ರಾಯಬಾಗ ಪಟ್ಟಣದಲ್ಲಿ 3 ಪ್ರಕರಣ ಸೇರಿದಂತೆ ಕುಡಚಿಯಲ್ಲಿ 10, ಬೊಮ್ಮನಾಳ 5, ಸುಟ್ಟಟ್ಟಿ ಗ್ರಾಮದಲ್ಲಿ 1, ಚಿಂಚಲಿ ಪಟ್ಟಣದಲ್ಲಿ 1 ಪ್ರಕರಣ ಕಂಡು ಬಂದಿದ್ದು, ಚಿಂಚಲಿ ಪಟ್ಟಣದ ಯುವಕ ಬಿಮ್ಸ್‌ ಆಸ್ಪತ್ರೆಯಲ್ಲಿ ಮಕೃತಪಟ್ಟಿರುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ| ಎಸ್‌.ಎಸ್‌.ಬಾನೆ ತಿಳಿಸಿದ್ದಾರೆ. ತಾಲೂಕಿನಲ್ಲಿ ಕೋವಿಡ್‌-19 ನಿಯಂತ್ರಣಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್- ಸ್ಯಾನಿಟೈಸರ್‌ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೇಲಿಂದ ಮೇಲೆ ಕೈ ತೊಳೆದುಕೊಳ್ಳಬೇಕು. ಅನಾವಶ್ಯಕವಾಗಿ ಹೊರಗೆ ಬರಬಾರದು. ಸಭೆ, ಸಮಾರಂಭದಲ್ಲಿ ಹೆಚ್ಚು ಜನರು ಪಾಲ್ಗೊಳ್ಳಬಾರದು ಎಂದು ಟಿಎಚ್‌ಒ ಮನವಿ ಮಾಡಿದ್ದಾರೆ.  ಸೋಂಕಿತರ ಮನೆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next