ತಿರುವನಂತಪುಂ: ಕೊನೆಗೂ ಶಬರಿ ಮಲೆ ದೇವಾಲಯಕ್ಕೆ 50 ವರ್ಷದೊಳಗಿನ ಇಬ್ಬರು ಮಹಿಳೆಯರು ಬುಧವಾರ ಬೆಳಗ್ಗೆ ಪ್ರವೇಶ ಮಾಡಿರುವ ಕುರಿತು ವಿವರಗಳು ಲಭ್ಯವಾಗಿವೆ.
40 ವರ್ಷ ಪ್ರಾಯದ ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಾಲಾಧಾರಿ ಮಹಿಳೆಯರು ನಸುಕಿನ 3 ಗಂಟೆಯ ಒಳಗೆ ದೇವಾಲಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ ವಾಪಾಸಾಗಿದ್ದಾರೆ. ಮಹಿಳೆಯರಿಗೆ ಪೊಲೀಸ್ ತಂಡವೊಂದು ರಕ್ಷಣೆ ನೀಡಿದೆ.
ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಧೃಡಪಡಿಸಿದ್ದಾರೆ.
Related Articles
ಇದೇ ಮಹಿಳೆಯರು ಡಿಸೆಂಬರ್ ತಿಂಗಳಿನಲ್ಲಿ ದೇವಾಲಯ ಪ್ರವೇಶಿಸಲು ಪ್ರಯತ್ನಿಸಿ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಾಪಾಸಾಗಿದ್ದರು ಎಂದು ತಿಳಿದು ಬಂದಿದೆ.
ಮಹಿಳೆಯರು ದೇವಾಲಯ ಪ್ರವೇಶಿಸುತ್ತಿರುವ ವಿಡಿಯೋವೊಂದು ಲಭ್ಯವಾಗಿದ್ದು, ಅದರಲ್ಲಿನ ದೃಶ್ಯಗಳು ಅಸ್ಪಷ್ಟವಾಗಿದೆ.
ಇದೀಗ ಮಹಿಳೆಯರಿಬ್ಬರು ದೇವಾಲಯ ಪ್ರವೇಶಿಸಿದ ಹಿನ್ನಲೆಯಲ್ಲಿ ಅಯ್ಯಪ್ಪ ಭಕ್ತ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.