Advertisement

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

11:50 PM May 25, 2024 | Team Udayavani |

ಮಡಿಕೇರಿ: ಜಿಲ್ಲೆಯ ಕಾಫಿ ತೋಟಗಳಲ್ಲಿ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿವೆ. ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿಯ ಕಾಫಿ ತೋಟ ಮತ್ತು ಕುಶಾಲನಗರ ತಾಲೂಕಿನ ತ್ಯಾಗತ್ತೂರು ಗ್ರಾಮದ ತೋಟದಲ್ಲಿ ಕಾಡಾನೆಗಳ ಮೃತದೇಹ ಕಂಡು ಬಂದಿದೆ.

Advertisement

7ನೇ ಹೊಸಕೋಟೆ ಬಳಿಯ ಕಾಫಿ ತೋಟದ‌ಲ್ಲಿ ಅಂದಾಜು 20 ವರ್ಷದ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಮಡಿಕೇರಿ ಡಿಎಫ್ಒ ಭಾಸ್ಕರ್‌, ಎಸಿಎಫ್ ಗೋಪಾಲ್‌, ಆರ್‌ಎಫ್ಒ ರತನ್‌, ಡಿಆರ್‌ಎಫ್ಒ ದೇವಯ್ಯ ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ, ಹೂಳಲಾಯಿತು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕಾಡಾನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಗತ್ತೂರು ಗ್ರಾಮದ ತೋಟದಲ್ಲಿ ಅಂದಾಜು 20 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಮಿಕರು ಕಾಫಿ ತೋಟದೊಳಗೆ ಕೆಲಸಕ್ಕೆ ತೆರಳುವ ಸಂದರ್ಭ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರದ ಹಿಂದೆಯೇ ಅನಾರೋಗ್ಯದಿಂದ ಕಾಡಾನೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ವನ್ಯಜೀವಿ ಅರಣ್ಯ ಅಧಿಕಾರಿ ಡಾ| ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಕಳೇಬರವನ್ನು ಹೂಳಲಾಯಿತು. ಸ್ಥಳಕ್ಕೆ ಮಡಿಕೇರಿ ಡಿಸಿಎಫ್ ಶಂಕರ್‌, ಸೋಮವಾರಪೇಟೆ ತಾಲೂಕು ಎಸಿಎಫ್ ಎ.ಎ. ಗೋಪಾಲ್‌, ವಲಯ ಅರಣ್ಯ ಅಧಿಕಾರಿ ರತನ್‌ ಕುಮಾರ್‌, ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ, ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹುಲಿ ದಾಳಿ
ವಿದೇಶಿ ತಳಿಯ
2 ಶ್ವಾನಗಳ ಸಾವು
ಮಡಿಕೇರಿ: ಹುಲಿ ದಾಳಿಗೆ ಸಿಲುಕಿ ವಿದೇಶಿ ತಳಿಯ ಎರಡು ಶ್ವಾನಗಳು ಮೃತಪಟ್ಟ ಘಟನೆ ವೀರಾಜಪೇಟೆ ಹೊರವಲಯದ ಕುಟ್ಟಂದಿ ಬಳಿ ಸಂಭವಿಸಿದೆ.

ಕಾಫಿ ತೋಟವೊಂದರಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲಕರು ಹುಲಿ ಹೆಜ್ಜೆ ಗುರುತು ಪತ್ತೆಹಚ್ಚಿದ್ದಾರೆ. ಅರಣ್ಯ ಇಲಾಖೆ ಸಿಬಂದಿ ಸ್ಥಳ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next