Advertisement

ಇಂದಿನಿಂದ ಮಂಗಳೂರು ಮೂಲಕ 2 ರೈಲು

10:12 AM Jun 01, 2020 | mahesh |

ಮಂಗಳೂರು: ಕೇಂದ್ರ ರೈಲ್ವೇ ಸಚಿವಾಲಯವು ಅಂತಾರಾಜ್ಯ ರೈಲು ಸಂಚಾರಕ್ಕೆ ಅವಕಾಶ ನೀಡಿದ್ದು, ಮಂಗಳೂರು ಜಂಕ್ಷನ್‌ ಮೂಲಕವಾಗಿ 2 ವಿಶೇಷ ರೈಲು ಸೋಮವಾರದಿಂದ ಹಾದುಹೋಗಲಿದೆ.

Advertisement

ಮುಂಬಯಿ-ತಿರುವನಂತಪುರ ನೇತ್ರಾವತಿ ಎಕ್ಸ್‌ ಪ್ರಸ್‌ (ನಂ.06345/ 06346) ಮತ್ತು ಹಜ್ರತ್‌ ನಿಜಾಮುದ್ದೀನ್‌- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಡೈಲಿ ಎಕ್ಸ್‌ಪ್ರೆಸ್‌ (02618/ 02617) ರೈಲುಗಳು ಮಂಗಳೂರು ಜಂಕ್ಷನ್‌ ಮೂಲಕ ತೆರಳಲಿವೆ. ತಿರುವನಂತಪುರದಿಂದ ಬೆಳಗ್ಗೆ ಹೊರಡುವ ರೈಲು ರಾತ್ರಿ ಮಂಗಳೂರು ಜಂಕ್ಷನ್‌ಗೆ ಆಗಮಿಸಿ ಮುಂಬಯಿಗೆ ತೆರಳಲಿದೆ. ಮತ್ತೂಂದು ರೈಲು ಎರ್ನಾಕುಳಂನಿಂದ ಹೊರಟು ರಾತ್ರಿ ಮಂಗಳೂರು ಜಂಕ್ಷನ್‌ ಮೂಲಕ ಪ್ರಯಾಣಿಸಲಿದೆ. ಮರುದಿನ ಮುಂಬಯಿಯಿಂದ ಮುಂಜಾನೆ ಮತ್ತು ಮಂಗಳಾ ಲಕ್ಷದ್ವೀಪ ರೈಲು ರಾತ್ರಿ ಮಂಗಳೂರು ಮೂಲಕ ಹಾದುಹೋಗಲಿವೆ.

ಪ್ರಯಾಣಿಕರು ಟಿಕೆಟ್‌ ಖಾತರಿಪಡಿಸಿಕೊಂಡ ಬಳಿಕವಷ್ಟೇ ರೈಲು ನಿಲ್ದಾಣ ಪ್ರವೇಶಿಸಬೇಕು ಮತ್ತು ರೈಲು ಹೊರಡುವುದಕ್ಕಿಂತ 90 ನಿಮಿಷ ಮುನ್ನ ರೈಲು ನಿಲ್ದಾಣದಲ್ಲಿ ಇರಬೇಕು. ಕಡ್ಡಾಯವಾಗಿ ಆಧಾರ್‌ ಸಹಿತ ದಾಖಲೆಗಳನ್ನು ತರಬೇಕು. ಟಿಕೆಟ್‌ ಬುಕ್‌ ಮಾಡುವವರು ಹೋಗಿ ಬರುವ ವಿವರ ನಮೂದಿಸುವುದು ಕಡ್ಡಾಯ. ಸದ್ಯ ಮಂಗಳೂರು ಜಂಕ್ಷನ್‌ ಮೂಲಕ ವಾರದಲ್ಲಿ 3 ದಿನ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿದೆ. ಅಗತ್ಯಕ್ಕೆ ತಕ್ಕಂತೆ “ಶ್ರಮಿಕ್‌’ ರೈಲು ಕೂಡ ಸಂಚರಿಸುತ್ತಿದೆ.

ಇಂದಿನಿಂದ 9 ವಿಶೇಷ ರೈಲು
ಕೇಂದ್ರ ರೈಲ್ವೇ ಸಚಿವಾಲಯ ಬಿಡುಗಡೆ ಮಾಡಿರುವ ಅಂತಾರಾಜ್ಯ ರೈಲುಗಳ ಪ್ರಥಮ ಪಟ್ಟಿಯಲ್ಲಿ ಮಂಗಳೂರು ಮೂಲಕ 2 ಸಹಿತ ಒಟ್ಟು 9 ವಿಶೇಷ ರೈಲುಗಳು ರಾಜ್ಯದಲ್ಲಿ ಜೂ.1ರಿಂದ ಸಂಚರಿಸಲಿವೆ. ಮುಂಬಯಿ ಸಿಎಸ್‌ಎಂಟಿ- ಗದಗ್‌ ಡೈಲಿ ಎಕ್ಸ್‌ಪ್ರೆಸ್‌ (01139/ 40), ಮುಂಬಯಿ ಸಿಎಂಎಸ್‌ಟಿ- ಬೆಂಗಳೂರು ಉದ್ಯಾನ ಡೈಲಿ ಎಕ್ಸ್‌ಪ್ರೆಸ್‌ (01301/ 02), ದಾನಪುರ -ಬೆಂಗಳೂರು -ಸಂಘಮಿತ್ರ ಡೈಲಿ ಎಕ್ಸ್‌ಪ್ರೆಸ್‌ (002296/ 95), ಹೊಸದಿಲ್ಲಿ- ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ (ವಾರದಲ್ಲಿ ಎರಡು ದಿನ 02629/ 02630), ಹೌರಾ- ಯಶವಂತಪುರ ಎಕ್ಸ್‌ ಪ್ರಸ್‌ (ವಾರದಲ್ಲಿ ಐದು ದಿನ 02245/ 46), ಬೆಂಗಳೂರು- ಹುಬ್ಬಳ್ಳಿ ಜನ ಶತಾಬ್ದಿ ಡೈಲಿ ಎಕ್ಸ್‌ಪ್ರೆಸ್‌ (02079/ 02080) ಮತ್ತು ಯಶವಂತಪುರ- ಶಿವಮೊಗ್ಗ ಜನಶತಾಬ್ದಿ ಡೈಲಿ ಎಕ್ಸ್‌ಪ್ರೆಸ್‌ (02089/ 020900).

ಕ್ವಾರಂಟೈನ್‌ ಕಡ್ಡಾಯ
ಹಾಟ್‌ಸ್ಪಾಟ್‌ ರಾಜ್ಯಗಳಿಂದ ಆಗಮಿಸುವ ಎಲ್ಲ ರೈಲು ಪ್ರಯಾಣಿಕರು ಜಿಲ್ಲಾಡಳಿತದ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕು.
ಎಂ.ಜೆ. ರೂಪಾ, ಅಪರ ಜಿಲ್ಲಾಧಿಕಾರಿ ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next