Advertisement
ವಡೋದರಾದ ಸಂಸದೆ ರಂಜನ್‌ಬೆನ್ ಧನಂಜಯ್ ಭಟ್ ಮತ್ತು ಸಬರಕಾಂತ ಬಿಜೆಪಿ ಅಭ್ಯರ್ಥಿ ಭಿಖಾಜಿ ಠಾಕೂರ್ ವೈಯಕ್ತಿಕ ಕಾರಣಗಳಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. 2014ರ ಚುನಾವಣೆಯಲ್ಲಿ ವಾರಾಣಸಿ ಜತೆಗೆ ವಡೋದರಾ ಕ್ಷೇತ್ರಗಳಲ್ಲಿ ಮೋದಿ ಸ್ಪರ್ಧಿಸಿ ಜಯ ಗಳಿಸಿದ್ದರು. ಅನಂತರ ವಾರಾಣಸಿ ಕ್ಷೇತ್ರ ಉಳಿಸಿಕೊಂಡು, ವಡೋದರಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ವಡೋದರಾದಿಂದ ರಂಜನ್ ಭಟ್ ಗೆದ್ದಿದ್ದರು. 2019ರಲ್ಲೂ ಅವರೇ ಜಯಶಾಲಿಯಾಗಿದ್ದರು. ಈ ಬಾರಿ ಅವರಿಗೆ ಬಿಜೆಪಿ ಮತ್ತೂಮ್ಮೆ ಟಿಕೆಟ್ ನೀಡಿದ್ದು, ಅದನ್ನು ಸ್ಥಳೀಯ ನಾಯಕರು ವಿರೋಧಿಸಿ, ಕೆಲವು ದಿನಗಳ ಹಿಂದೆ ಕ್ಷೇತ್ರದಲ್ಲಿ ಬ್ಯಾನರ್‌ಗಳು ಹರಿದಾಡಿದ್ದವು. ಪಕ್ಷದ ಆಂತರಿಕ ಭಿನ್ನಮತದ ಕಾರಣ ರಂಜನ್ ಮತ್ತು ಭಿಖಾಜಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. Advertisement
Lok Sabha Election: ಗುಜರಾತ್‌ನ 2 ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ!
09:04 AM Mar 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.