Advertisement

ಜಮ್ಮು-ಕಾಶ್ಮೀರ: ಭದ್ರತಾಪಡೆಗಳಿಂದ ಇಬ್ಬರು ಉಗ್ರರ ಎನ್ ಕೌಂಟರ್

09:01 AM Apr 23, 2020 | Mithun PG |

ಜಮ್ಮು-ಕಾಶ್ಮೀರ: ಪೊಲೀಸರು ಮತ್ತು ಸಿ ಆರ್ ಪಿಎಫ್ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎರಡು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

Advertisement

ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಎರಡು ಉಗ್ರರನ್ನು ಎನ್ ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ.

ಮಂಗಳವಾರ ಸಂಜೆಯಿಂದ ಜೈನ್ ಪೋರಾ ಗ್ರಾಮದ ಮೆಲ್ಹೋರಾದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ದಮನಕ್ಕಾಗಿ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಬುಧವಾರ ಮುಂಜಾನೆ ಎರಡು ಉಗ್ರರನ್ನು ಹತ್ಯೆಗೈಯಲಾಗಿದೆ. ಇನ್ನೂ ಎರಡು ಉಗ್ರರು ಅಡಗಿ ಕುಳಿತ್ತಿದ್ದಾರೆಂದು ವರದಿಯಾಗಿದ್ದು  ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಕೋವಿಡ್ ಭೀತಿ ನಡುವೆ ಕಳೆದೆರಡು ವಾರಗಳಿಂದ ಜಮ್ಮು ಕಾಶ‍್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು ಭಾರತೀಯ ಸೇನಾ ಪಡೆ ಸತತವಾಗಿ ಕಾರ್ಯಾಚರಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next