Advertisement

ಬಾಹ್ಯಾಕಾಶಕ್ಕೆ 2 ಉಪಗ್ರಹ

12:30 AM Jan 26, 2019 | |

ಶ್ರೀಹರಿಕೋಟಾ: ಗುರುವಾರ ತಡರಾತ್ರಿ ಇಸ್ರೋ ಎರಡು ಪುಟಾಣಿ ಉಪಗ್ರಹಗಳನ್ನು ನಭಕ್ಕೆ ಕಳುಹಿಸಿದೆ. ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ನಿಲ್ದಾಣದಿಂದ ಗುರುವಾರ ರಾತ್ರಿ 11:39ರ ಸುಮಾರಿಗೆ ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ ಸಿ44 ರಾಕೆಟ್‌ ತನ್ನಲ್ಲಿದ್ದ “ಮೈಕ್ರೋಸ್ಯಾಟ್‌-ಆರ್‌’ ಮತ್ತು “ಕಲಾಂಸ್ಯಾಟ್‌- ವಿ2′ ಉಪಗ್ರಹ ಗಳನ್ನು ಅಂತರಿಕ್ಷಕ್ಕೆ ರವಾನಿಸಿತು. ಉಡಾವಣೆಗೊಂಡ 13 ನಿಮಿಷ, 30 ಸೆಕೆಂಡ್‌ಗಳ ನಂತರ ಮೈಕ್ರೋಸ್ಯಾಟ್‌-ಆರ್‌ ಬಾಹ್ಯಾಕಾ ಶಕ್ಕೆ ಸೇರ್ಪಡೆಗೊಂಡರೆ, ಅದಾಗಿ, 90 ನಿಮಿಷಗಳ ನಂತರ ಕಲಾಂ ಸ್ಯಾಟ್‌-ವಿ2 ಉಪಗ್ರಹ ಬಾಹ್ಯಾಕಾಶಕ್ಕೆ ಸೇರ್ಪಡೆಗೊಂಡಿತು. 

Advertisement

 ಮೈಕ್ರೋಟ್‌-ಆರ್‌
ಇದು ಇಸ್ರೋ ನಿರ್ಮಿತ ಸೇನಾ ಇಮೇಜಿಂಗ್‌ ಉಪಗ್ರಹ. ಭೂಮಿಯಿಂದ 277 ಕಿ.ಮೀ. ದೂರ ಸಾಗಿದ ನಂತರ ಬಾಹ್ಯಾಕಾಶಕ್ಕೆ ಸೇರ್ಪಡೆ. ಇದರ ಬಳಕೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಸೇನೆಗಾಗಿ ಮೀಸಲು.  
ಕಲಾಂಸ್ಯಾಟ್‌-ವಿ2 ಚೆನ್ನೈನ “ಸ್ಪೇಸ್‌ ಕಿಡ್ಸ್‌ ಇಂಡಿಯಾ’ದ ಐವರು ವಿದ್ಯಾರ್ಥಿಗಳು ನಿರ್ಮಿಸಿರುವ ಉಪಗ್ರಹ. ಕೇವಲ 10 ಸೆಂ.ಮೀ. ಘನಾಕೃತಿಯಲ್ಲಿ (ಕ್ಯೂಬ್‌ನಲ್ಲಿ) ಉಪಗ್ರಹದ ಅಳವಡಿಕೆ. ಕೇವಲ 1.2 ಕೆಜಿ. ತೂಕವಿದ್ದು, ಒಂದು ಮರದ ಕುರ್ಚಿಯ ತೂಕಕ್ಕಿಂತ ಹಗುರ ಹಾಗೂ ನಿರ್ಮಾಣ ವೆಚ್ಚ 12 ಲಕ್ಷ ರೂ. ಬಾಹ್ಯಾಕಾಶದಲ್ಲಿ ಕಾರ್ಯಾಚರಣೆ ಅವಧಿ ಕೇವಲ 2 ತಿಂಗಳು. 

ಪಿಎಸ್‌ಎಲ್‌ವಿಯಿಂದ ಮತ್ತೂಂದು ಯಶಸ್ವಿ ಉಡಾವಣೆ ಕೈಗೊಂಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ವಿದ್ಯಾರ್ಥಿ ಗಳೇ ನಿರ್ಮಿಸಿದ ಕಲಾಂಸ್ಯಾಟ್‌-ವಿ2 ಸಹ ಕಕ್ಷೆ ಸೇರಿರುವುದು ಖುಷಿ ತಂದಿದೆ. 
ನರೇಂದ್ರ ಮೋದಿ ಪ್ರಧಾನಿ

ಮೈಕ್ರೋಸ್ಯಾಟ್‌-ಆರ್‌
740 ಕೆ.ಜಿ.  “ಮೈಕ್ರೋಸ್ಯಾಟ್‌-ಆರ್‌’ನ ಒಟ್ಟು ತೂಕ
274 ಕಿ.ಮೀ. ಬಾಹ್ಯಾಕಾಶಕ್ಕೆ ಸೇರ್ಪಡೆಗೊಂಡಾಗ ಭೂಮಿಯಿಂದ ಇದ್ದ ದೂರ
03 ಸೇನೆಗಾಗಿ ಉಡಾವಣೆಗೊಂಡ ಮೂರನೇ ಉಪಗ್ರಹ

ಕಲಾಂಸ್ಯಾಟ್‌-ವಿ2
10 ಸೆಂ.ಮೀ. ಅಳತೆಯ ಘನಾಕೃತಿಯ ಉಪಗ್ರಹ
12  ಕೆ.ಜಿ. ಉಪಗ್ರಹದ ತೂಕ
12 ಲಕ್ಷ  ಕಲಾಂಸ್ಯಾಟ್‌-ವಿ2 ನಿರ್ಮಾಣ ವೆಚ್ಚ
02 ತಿಂಗಳು ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುವ ಅವಧಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next