ಚಿಂದಿ ಆಯುವ ಮಕ್ಕಳ ಕೈಯಲ್ಲಿ ಕಂತೆ ಕಂತೆ 500 ರ ನೋಟುಗಳು ಪತ್ತೆಯಾಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಮಕ್ಕಳ ಕೈಯಲ್ಲಿ ಇರುವುದು ಚಲಾವಣೆಯಲ್ಲಿ ಇರುವ 500 ರ ನೋಟಲ್ಲ ಬದಲಿಗೆ ಈ ಹಿಂದೆ ಕೇಂದ್ರ ಸರಕಾರ ಅಮಾನ್ಯಗೊಳಿಸಿರುವ ನೋಟುಗಳು ಆದರೆ ಇಷ್ಟೊಂದು ಮೊತ್ತದ ನೋಟುಗಳು ಮಕ್ಕಳಿಗೆ ಸಿಕ್ಕಿದ್ದಾದರೂ ಎಲ್ಲಿಂದ ಎಂಬುದು ಯಕ್ಷ ಪ್ರಶ್ನೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಇದರಲ್ಲಿ ಚಿಂದಿ ಆಯುವ ಇಬ್ಬರು ಯುವಕರು ತಮ್ಮ ತಮ್ಮ ಕೈಯಲ್ಲಿ ಕಂತೆ ಕಂತೆ 500ರ ನೋಟುಗಳನ್ನು ಹಿಡಿದುಕೊಂಡು ಸಂಭ್ರಮಿಸುತ್ತಿರುವುದು ಕಾಣಬಹುದು ಆದರೆ ಆ ಮಕ್ಕಳಿಗೆ ಅಷ್ಟೊಂದು ಮೊತ್ತದ ಹಣ ಸಿಕ್ಕಿದ್ದು ಎಲ್ಲಿಂದ ಎಂಬುದು ಮಾತ್ರ ಯಕ್ಷ ಪ್ರಶ್ನೆ.
ಮಕ್ಕಳು ಹಣವನ್ನು ಹಿಡಿದುಕೊಂಡು ಮುತ್ತಿಕ್ಕಿ ಸಂಭ್ರಮಿಸುತ್ತಿರುವುದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದು. ಚಿಂದಿ ಆಯುವ ವೇಳೆ ಮಕ್ಕಳಿಗೆ ಹಣ ತುಂಬಿರುವ ಬ್ಯಾಗ್ ಸಿಕ್ಕಿರುವ ಸಾಧ್ಯತೆ ಇರಬಹುದು ಹಣ ಸಿಕ್ಕಿದ ಖುಷಿಯಲ್ಲಿ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಮಕ್ಕಳು ತೋರಿಸಿ ಸಂಭ್ರಮಪಡುತ್ತಿರುವುದು ಕಾಣಬಹುದು. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಯಾವ ಪ್ರದೇಶದ್ದು ಎಂಬುದು ಮಾತ್ರ ಗೊತ್ತಾಗಿಲ್ಲ.
500 ಮತ್ತು 1,000 ಮುಖ ಬೆಲೆಯ ನೋಟುಗಳನ್ನು ನವೆಂಬರ್ 2016 ರಲ್ಲಿ ಅಮಾನ್ಯಗೊಳಿಸಲಾಯಿತು. ಜೊತೆಗೆ ಡಿಸೆಂಬರ್ 30, 2016 ರ ಒಳಗೆ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಾಗರಿಕರಿಗೆ ಅವಕಾಶ ನೀಡಲಾಗಿತ್ತು. ಸದ್ಯ ಈ ನೋಟುಗಳಿಗೆ ಯಾವುದೇ ಮೌಲ್ಯವಿಲ್ಲ ಆದರೂ ಮಕ್ಕಳ ಕೈಗೆ ಇಷ್ಟೊಂದು ಮೊತ್ತದ ಹಣ ಸಿಕ್ಕಿರುವುದು ಯಕ್ಷ ಪ್ರಶ್ನೆ.