ನವದೆಹಲಿ:ಭಾರತೀಯ ಅಧಿಕಾರಿಗಳನ್ನು ಹಿಂಬಾಲಿಸಿ ಗೂಢಚರ್ಯೆ ನಡೆಸುತ್ತಿದ್ದ ದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮೀಷನ್ ನ ಇಬ್ಬರು ಅಧಿಕಾರಿಗಳು ಹಾಗೂ ಚಾಲಕನನ್ನು ಭಾನುವಾರ ಬಂಧಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಅಧಿಕಾರಿಗಳಿಗೆ ಪಾಕಿಸ್ತಾನ ಸೇನೆಯ ಜತೆ ಸಂಪರ್ಕ ಇದ್ದಿರುವುದಾಗಿ ಮೂಲಗಳು ಹೇಳಿರುವುದಾಗಿ ವರದಿ ವಿವರಿಸಿದೆ.
ಸೇನಾ ಗುಪ್ತಚರ ಇಲಾಖೆ, ಐಬಿ ಅಧಿಕಾರಿಗಳು ಮತ್ತು ದೆಹಲಿಯ ವಿಶೇಷ ಸೆಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನವ ದೆಹಲಿಯ ಕರೋಲ್ ಬಾಗ್ ನಲ್ಲಿ ಮೂವರು ರೆಡ್ ಹ್ಯಾಂಡ್ ಆಗಿ ಬಲೆ ಬಿದ್ದಿರುವುದಾಗಿ ವರದಿ ಹೇಳಿದೆ.
ವರದಿಯ ಪ್ರಕಾರ, ಇಬ್ಬರು ಅಧಿಕಾರಿಗಳನ್ನು ಅಬಿದ್ ಹುಸೈನ್ ಮತ್ತು ತಾಹೀರ್ ಹುಸೈನ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಐಎಸ್ ಐ ರಹಸ್ಯ ಸಂಚಿನ ಪ್ರಕಾರ ಇಬ್ಬರೂ ಪಾಕಿಸ್ತಾನ ಹೈಕಮೀಷನ್ ನ ವೀಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ವಿವರಿಸಿದೆ.