Advertisement

ಜಲ್ದೀ ಜಡೆ

12:19 PM Oct 11, 2017 | |

ತುಂಬಾ ಅರ್ಜೆಂಟಾಗಿ ಎಲ್ಲಿಗೋ ಹೊರಡಬೇಕಿರುತ್ತದೆ. ತಲೆ ಬಾಚಿಕೊಳ್ಳುತ್ತಾ ಕನ್ನಡಿ ಮುಂದೆ ನಿಲ್ಲಲು ಸಮಯವಿರುವುದಿಲ್ಲ. ಆಗ ಕಡಿಮೆ ಸಮಯದಲ್ಲಿ ನೀಟಾಗಿ, ಸಿಂಪಲ್‌ ಆಗಿ ಕೂದಲು ಸೆಟ್‌ ಮಾಡಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ…

Advertisement

1. ಜೆಲ್‌ ಹಾಕಿ ಸೆಟ್‌ ಮಾಡಿ
ಕೂದಲನ್ನು ಬಾಚಣಿಕೆಯಿಂದ ಸೆಟ್‌ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ. ಹಾಗೇ ಬಿಡೋಣವೆಂದರೆ ಗಾಳಿಗೆ ಹಾರಾಡಿ ಕಿರಿಕಿರಿಯಾಗುತ್ತದೆ. ಈ ಸಮಸ್ಯೆಗೆ ಸರಳ ಉಪಾಯವೇನು ಗೊತ್ತೇ? ಸ್ವಲ್ಪವೇ ಸ್ವಲ್ಪ ಹೇರ್‌ ಜೆಲ್‌ ಹಚ್ಚಿ ಕೂದಲನ್ನು ಹಿಂಬದಿಗೆ ತಳ್ಳಿ. ಆಗ ಅದು ನೀಟಾಗಿ ಕುಳಿತುಕೊಳ್ಳುತ್ತದೆ. ಕೂದಲು ಕೂಡ ಫ್ರೆಶ್‌ ಆಗಿರುತ್ತದೆ. ಬೇಕಿದ್ದರೆ ಹೇರ್‌ಬ್ಯಾಂಡ್‌ ಧರಿಸಬಹುದು. 

2. ಸಣ್ಣ ಕ್ಲಿಪ್‌ ಧರಿಸುವುದು
ಎರಡೂ ಬದಿಯ ಸ್ವಲ್ಪ ಕೂದಲನ್ನು ಹಿಂದಕ್ಕೆ ಬಾಚಿಕೊಳ್ಳಿ. ಬೇಕೆನಿಸಿದರೆ ಕೂದಲನ್ನು ಎರಡು- ಮೂರು ಬಾರಿ ಟ್ವಿಸ್ಟ್‌ ಮಾಡಿ ಹಿಂದಕ್ಕೆ ಸೇರಿಸಬಹುದು. ನಂತರ ಎರಡೂ ಬದಿಯ ಕೂದಲನ್ನು ಒಂದೆಡೆ ಸೇರಿಸಿ ಕ್ಲಿಪ್‌ ಹಾಕಿ. ಗೋಲ್ಡನ್‌ ಕಲರ್‌ನ ಕ್ಲಿಪ್‌ ಹಾಕಿದರೆ ಇನ್ನೂ ಚೆನ್ನಾಗಿ ಕಾಣಿಸುತ್ತದೆ. 

3. ಸಿಂಪಲ್‌ ಜಡೆ
ಕೂದಲನ್ನು ಹಿಂಬದಿಗೆ ಅಥವಾ ಒಂದು ಸೈಡಿಗೆ ಬಾಚಿಕೊಂಡು, ಜಡೆ  ಹಾಕಿಕೊಳ್ಳಲು ಜಾಸ್ತಿ ಸಮಯ ಬೇಕಾಗದು. ಟ್ರೆಂಡಿಯಾಗಿ ಕಾಣಿಸಲು, ಮೊದಲು ಪೋನಿ ಕಟ್ಟಿ ನಂತರ ಸಡಿಲವಾಗಿ ಜಡೆ ಹೆಣೆದು ಕೊನೆಯಲ್ಲಿ ರಬ್ಬರ್‌ ಬ್ಯಾಂಡ್‌ ಹಾಕಿಕೊಳ್ಳಬಹುದು. 

4. ಅರ್ಧ ಪೋನಿ ಟೇಲ್‌
ಮೊದಲು ಕೂದಲಿಗೆ ಜೆಲ್‌ ಹಚ್ಚಿ ಸ್ಮೂತ್ ಮಾಡಿಕೊಳ್ಳಿ. ನಂತರ ಸಿಂಪಲ್‌ ಪೋನಿ ಟೇಲ್‌ ಹಾಕಿ ಅದನ್ನು ಕುತ್ತಿಗೆಯವರೆಗೆ ಬರುವಂತೆ ಮಡಚಿಬಿಡಿ. ಇದು ನೀಳ ಕೇಶರಾಶಿಯವರಿಗೆ ಹೇಳಿ ಮಾಡಿಸಿದ ವಿನ್ಯಾಸ. 

Advertisement

5. ಸುಮ್ಮನೆ ಸೈಡಿಗೆ ಬಿಡಿ
ಆಗಷ್ಟೇ ಸ್ನಾನ ಮಾಡಿದ ಒದ್ದೆ ಕೂದಲನ್ನು ಸುಮ್ಮನೆ ಸೈಡಿಗೆ ತಳ್ಳಿದರೂ ಸಾಕು, ಮುಖ ಮುದ್ದಾಗಿ ಕಾಣಿಸುತ್ತದೆ. ಸೈಡಿಗೆ ತಳ್ಳಿದ ಕೂದಲನ್ನು ಸ್ವಲ್ಪ ಬಾಚಿ ಕಿವಿಯ ಹಿಂಬದಿಯಲ್ಲಿ ಕ್ಲಿಪ್‌ ಹಾಕಿ ಸೆಟ್‌ ಮಾಡಿದರೆ ಕಿರಿಕಿರಿಯೂ ಇರುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next