Advertisement

Viral: ತಾಜ್‌ ಮಹಲ್‌ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ತನಿಖೆಗೆ ಆದೇಶ

01:15 PM Sep 15, 2024 | Team Udayavani |

ಆಗ್ರಾ:  ಆಗ್ರಾದಲ್ಲಿ ಸತತ 3 ದಿನಗಳಿಂದ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಇದೀಗ ತಾಜ್‌ ಮಹಲ್‌ ಆವರಣದಲ್ಲಿನ ಮತ್ತೊಂದು ವಿಡಿಯೋ ಹರಿದಾಡಿದೆ.

Advertisement

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ ಮಹಲ್‌ (Taj Mahal) ವೀಕ್ಷಣೆಗೆ ಪ್ರತಿನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಯಾರೋ ಇಬ್ಬರು ಪ್ರವಾಸಿಗರು ತಾಜ್‌ ಮಹಲ್‌ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದು, ಈ ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಮೂಲಗಳ ಪ್ರಕಾರ ಶನಿವಾರ(ಸೆ.14ರಂದು) ಇಬ್ಬರು ಪ್ರವಾಸಿಗರು ತಾಜ್‌ ಮಹಲ್‌ ಕಟ್ಟಡದ ಆವರಣದಲ್ಲಿ ಮೂತ್ರ ವಿಸರ್ಜಿಸಿದ್ದಾರೆ ಎನ್ನಲಾಗಿದೆ.

ಈ ಘಟನೆ ತಾಜ್‌ ಮಹಲ್‌ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದ್ದು, ವೈರಲ್ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ( Archaeological Survey of India) ತಿಳಿಸಿದೆ.

ಹೆಚ್ಚುವರಿಯಾಗಿ, ಉದ್ಯಾನಗಳಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

Advertisement

ಈ ವಿಷಯದ ಬಗ್ಗೆ ತಾಜ್ ಮಹಲ್ ಉಸ್ತುವಾರಿ, ಮತ್ತು ಭದ್ರತಾ ಸಿಬ್ಬಂದಿ, ಉದ್ಯಾನಗಳಲ್ಲಿ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರಿಕೆಯನ್ನು ವಹಿಸಬೇಕೆಂದು ಆಗ್ರಾ ಎಎಸ್‌ಐ ಮುಖ್ಯಸ್ಥ ಆರ್‌ಕೆ ಪಟೇಲ್ ಹೇಳಿದ್ದಾರೆ.

‘‘ತಾಜ್ ಮಹಲ್ ಕಾಂಪ್ಲೆಕ್ಸ್ ನಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದರೂ ಪ್ರವಾಸಿಗರು ಉದ್ಯಾನದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಯಾವ ಇಲಾಖೆಗೂ ಕಂಡಿಲ್ಲವೇ ಎಂದು ಮಾರ್ಗದರ್ಶಿ ಸಂಘದ ಅಧ್ಯಕ್ಷ ದೀಪಕ್ ದಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

ಈ ನಡುವೆ ಮೂತ್ರ ವಿಸರ್ಜನೆ ಘಟನೆ ಬಳಿಕ ತಾಜ್‌ ಮಹಲ್‌ ಅಪವಿತ್ರಗೊಂಡಿದೆ ಎಂದು ಗಂಗಾಜಲದೊಂದಿಗೆ ಆಗಮಿಸಿದ ಹಿಂದೂ ಕಾರ್ಯಕರ್ತರೊಬ್ಬರನ್ನು ಪೊಲೀಸರು ತಡೆ ಹಿಡಿದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next