Advertisement

ವೆಬ್ ಸೈಟ್ ನೋಡಿ ಆಲ್ಕೋಹಾಲ್ ತಯಾರಿಸಿದರು.ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿಆದದ್ದೆ ಬೇರೆ!

09:29 AM Apr 20, 2020 | Mithun PG |

ತಮಿಳುನಾಡು: ಲಾಕ್ ಡೌನ್ ಕಾರಣದಿಂದ ಎಲ್ಲೆಡೆ ಮದ್ಯದಂಗಡಿಗಳು ಸ್ಥಗಿತಗೊಂಡಿರುವುದರಿಂದ ಬೆಸೆತ್ತ ಇಬ್ಬರು ವ್ಯಕ್ತಿಗಳು ಮನೆಯಲ್ಲಿಯೇ ಶರಾಬು ತಯಾರಿಸಲು ಮುಂದಾಗಿ ಪೊಲೀಸರ ಅತಿಥಿಯಾದ ಘಟನೆ ನಮಕ್ಕಲ್ ಗ್ರಾಮದಲ್ಲಿ ನಡೆದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

Advertisement

ಜನಪ್ರಿಯ ವಿಡಿಯೋ ವೆಬ್ ಸೈಟ್ ಒಂದರಲ್ಲಿ ಮದ್ಯ ತಯಾರಿಸುವ ವಿಧಾನವನ್ನು ಕಂಡುಕೊಂಡು ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು.  ಮಾತ್ರವಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದರು. ಆದರೇ ಇನ್ನೇನು ಕುಡಿಯಬೇಕು ಎನ್ನುವಷ್ಟರಲ್ಲಿ ಪೊಲೀಸರು ಬಂದು ಶುಕ್ರವಾರ ಈ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಮಾತ್ರವಲ್ಲದೆ ಲಿಕ್ಕರ್ ತಯಾರಿಸಲು ಇರಿಸಿದ್ದ ವಸ್ತುಗಳನ್ನು ಮತ್ತು ಸ್ಥಳದಲ್ಲಿದ್ದ ಕಂಟೇನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ತಿಳಿದುಬಂದಿದ್ದು. ಅದ್ದರಿಂದ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ  ಎಂದು ಪೊಲೀಸ್ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ವ್ಯಕ್ತಿಯೊಬ್ಬ  ಆಲ್ಕೋಹಾಲ್ ತಯಾರಿಸಿ ಅದರ ಬ್ಯಾರಲ್ ಗಳನ್ನು ಸ್ನಾನಗೃಹದ ನೆಲದಡಿಯಲ್ಲಿ ಹುದುಗಿಸಿಟ್ಟಿದ್ದ. ಕೆಲವು ದಿನಗಳ ನಂತರ ಕುಡಿದರೆ ಉತ್ತಮವಾಗಿರುತ್ತದೆ ಎಂಬ ಯೋಜನೆ ಆತನದಾಗಿತ್ತು. ಆದರೆ ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಆತನನನ್ನು ಬಂಧಿಸಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ  ಎಂದು ಇದೇ ವೇಳೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next