Advertisement

ಅಮೆರಿಕ: ಗುಂಡಿನ ದಾಳಿಗೆ 30 ಬಲಿ

08:13 AM Aug 05, 2019 | mahesh |

ವಾಷಿಂಗ್ಟನ್‌: ಅಮೆರಿಕದಲ್ಲಿ ಶನಿವಾರ ಮತ್ತು ರವಿವಾರ ನಡೆದ ಎರಡು ಗುಂಡಿನ ದಾಳಿಯಲ್ಲಿ ಒಟ್ಟು 30 ಜನರು ಸಾವನ್ನಪ್ಪಿ ದ್ದಾರೆ. 24 ಗಂಟೆಗಳ ಅವಧಿಯಲ್ಲಿ ಟೆಕ್ಸಾಸ್‌ ಮತ್ತು ಓಹಿಯೊದಲ್ಲಿ ಗುಂಡಿನ ದಾಳಿ ನಡೆದಿದೆ. ಟೆಕ್ಸಾಸ್‌ನಲ್ಲಿ ಶನಿವಾರ ರಾತ್ರಿ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಓಹಿಯೊದಲ್ಲಿ ರವಿವಾರ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ ಹತ್ತು ಜನರ ಹತ್ಯಗೈದಿ ದ್ದಾನೆ. ನೈಟ್ಕ್ಲಬ್‌ಗಳು, ಬಾರ್‌ಗಳು, ಆರ್ಟ್‌ ಗ್ಯಾಲರಿ ಮತ್ತು ಅಂಗಡಿಗಳಿಗೆ ಹೆಸರಾದ ಓಹಿಯೋದಲ್ಲಿ ದಾಳಿ ನಡೆಸಿದ ವ್ಯಕ್ತಿಯನ್ನು ಸ್ಥಳದಲ್ಲೇ ಹತ್ಯೆಗೈಯಲಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ. ಟೆಕ್ಸಾಸ್‌ನ ಎಲ್ ಪಾಸೋ ಪಟ್ಟಣದ ವಾಲ್ಮಾರ್ಟ್‌ ಮಳಿಗೆಯಲ್ಲಿ ಸಶಸ್ತ್ರಧಾರಿ 21 ವರ್ಷದ ದುಷ್ಕರ್ಮಿಯೊಬ್ಬ ಒಳನುಗ್ಗಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾನೆ. ಇಲ್ಲಿ 20 ಜನರು ಸಾವನ್ನಪ್ಪಿದ್ದು, 26 ಜನರಿಗೆ ಗಾಯವಾಗಿದೆ.

Advertisement

ಜನಾಂಗೀಯ ದ್ವೇಷ ಕಾರಣ: ದಾಳಿ ನಡೆಸಿ ದಾತನನ್ನು ಪ್ಯಾಟ್ರಿಕ್‌ ಕ್ರೂಸಿಯಸ್‌ ಎಂದು ಗುರುತಿಸಲಾಗಿದ್ದು, ದಾಳಿ ಅನಂತರ ಆತ ಪೊಲೀಸರಿಗೆ ಶರಣಾಗಿದ್ದಾನೆ. ಈತ ಡಲ್ಲಾಸ್‌ ನಗರದವ ಎಂದು ಹೇಳಲಾಗಿದೆ. ಟೆಕ್ಸಾಸ್‌ನಲ್ಲಿ ಹಿಸ್ಪಾನಿಕ್‌ ಜನರ ವಿರುದ್ಧದ ದ್ವೇಷವೇ ಈ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next