Advertisement

Mangaluru ಪಿಜಿಯಿಂದ 2 ಲ್ಯಾಪ್‌ಟಾಪ್‌, ಹಣ ಕಳವು

09:02 PM Aug 12, 2024 | Team Udayavani |

ಮಂಗಳೂರು: ನಗರದ ಪಿಜಿಯೊಂದರಿಂದ 2 ಲ್ಯಾಪ್‌ಟಾಪ್‌ಗಳು, ಹಣ ಮತ್ತು ಎಟಿಎಂ ಕಾರ್ಡನ್ನು ಕಳವು ಮಾಡಿರುವ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮಯೂರ್‌ ನಾಯ್ಕ ಮತ್ತು ಚರಣ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ.9ರಂದು ರಾತ್ರಿ ಕಂಪೆನಿಯ ಕೆಲಸ ಮುಗಿಸಿ ಬೇರೆ ಬೇರೆ ಬ್ಯಾಗ್‌ಗಳಲ್ಲಿ 2 ಲ್ಯಾಪ್‌ಟಾಪ್‌ಗಳನ್ನಿಟ್ಟು ಮಲಗಿದ್ದರು.

ಮರುದಿನ ಬೆಳಗ್ಗೆ 8 ಗಂಟೆಗೆ ಎದ್ದು ನೋಡಿದಾಗ ಲ್ಯಾಪ್‌ಟಾಪ್‌ಗಳು, 800 ರೂ., ಎಟಿಎಂ ಕಾರ್ಡ್‌ ಸಹಿತ ಅಂದಾಜು 2,11,500 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next