ಚೇಳೂರು: ತಾಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಪುರಾತನ ಕಾಲದ ಪ್ರಸಿದ್ಧ ಪಾಳ್ಯಕೆರೆ ಗ್ರಾಮದ ಲಕ್ಷ್ಮೀ ವೆಂಕಟರವಣಸ್ವಾಮಿ ದೇವಾಲಯದ ಅಭಿವೃದ್ಧಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎರಡು ಲಕ್ಷ ರೂ. ಅನುದಾನ ವಿತರಿಸಲಾಯಿತು.
ಹೆಸರುವಾಸಿಯಾದ ಪಾಳ್ಯಕೆರೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರವಣಸ್ವಾಮಿ ದೇವಸ್ಥಾನ ಅಭಿವೃದ್ಧಿ ಮಾಡಲು ಗ್ರಾಮ ಸ್ಥರು ಹಾಗೂ ಅನೇಕ ದಾನಿಗಳು ಶ್ರಮಿಸುತ್ತಿದ್ದಾರೆ. ಗ್ರಾಮ ಅಭಿವೃದ್ಧಿಯತ್ತ ಸಾಗಲು ಊರಿನ ಮಧ್ಯದಲ್ಲಿರುವ ಲಕ್ಷ್ಮೀ ವೆಂಕಟರವಣ ಸ್ವಾಮಿ ದೇವಸ್ಥಾನ, ಗೋಪುರವನ್ನು ನವೀಕರಣ ಮಾಡಬೇಕೆಂಬ ನಿರ್ಧಾರದ ಮೇಲೆ ಟ್ರಸ್ಟ್ ಮುಖಾಂತರ ಅಭಿವೃದ್ಧಿ ಸಾಧಿಸಲು ಶ್ರಮಿಸುತ್ತಿದ್ದಾರೆ.
ಜಿಲ್ಲಾ ಯೋಜನಾಧಿಕಾರಿ ಗಿರೀಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಹಲವಾರು ಕಾರ್ಯಕ್ರಮ ಗಳು ಗ್ರಾಮಗಳ ಅಭಿ ವೃದ್ಧಿಗೆ ಸಹಕಾರಿಯಾಗಿದೆ. ಧರ್ಮಾಧಿ ಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಜಾತಿ, ಧರ್ಮ, ಬೇದ ವಿಲ್ಲದೆ ದೇವಸ್ಥಾನ ಗಳ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಅಭಿವೃದ್ಧಿ ಕ್ಷೇತ್ರ ಪಾಲಕರಾದ ಜೈಪಾಲ್, ಚೇಳೂರಿನ ನೊಂಡಲ್ ಅಭಿಷೇಕ್ ಮತ್ತು ವೆಂಕರ ವಣ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಶ್ರೀನಾಥ ರೆಡ್ಡಿ, ಸದಸ್ಯರಾದ ಪಿ.ಎನ್.ಶೇಷಗಿರಿರಾವ್, ಪಿ.ಆರ್.ಸುಂದರೇಶ್, ಪಿ. ವೆಂಕಟರೆಡ್ಡಿ, ಜ್ಯೋತಿ ನಗರಂ ವೆಂಕಟ ರವಣಸ್ವಾಮಿ, ಆಂಜನೇಯ ಪ್ರಸಾದ್, ಡಂಕಣಾಚಾರಿ, ರಾಮಕೃಷ್ಣಾರೆಡ್ಡಿ, ಎಂ.ಕೆ. ನಾರಾಯಣರೆಡ್ಡಿ, ಮಾಚನಹಳ್ಳಿ ಪಿ. ವೆಂಕಟ ರಾಮರೆಡ್ಡಿ, ನರ ಸಿಂಹಮೂರ್ತಿ ಮತ್ತು ಎಲ್ಲಾ ಸದಸ್ಯರು ಹಾಗೂ ಗ್ರಾಮ ಸ್ಥರು ಭಾಗವಹಿಸಿದ್ದರು.
ಗ್ರಾಮಸ್ಥರಲ್ಲಿ ಸಂತಸ :
ದೇವಸ್ಥಾನ ಸಮಿತಿ ಅಧ್ಯಕ್ಷರಾಗಿರುವ ಶ್ರೀನಾಥರೆಡ್ಡಿ ಮಾತನಾಡಿ, ದೇವಸ್ಥಾನದ ಕಾಮಗಾರಿಯ ಬಗ್ಗೆ ಪೂಜ್ಯರಲ್ಲಿ ವಿಮರ್ಶೆ ಮಾಡಿದಾಗ ಅವರು ಒಪ್ಪಿ ನಮ್ಮ ದೇವಸ್ಥಾನಕ್ಕೆ ವಾರದ ಹಿಂದೆ ಎರಡು ಲಕ್ಷ ರೂ.ಚೆಕ್‌ಮುಖಾಂತರ ಕೊಡುತ್ತೇನೆಂದು ಭರವಸೆ ನೀಡಿದ್ದರು.ಅದೇ ರೀತಿ ಇದೀಗ ಅನುದಾನ ನೀಡಿದ್ದು, ಗ್ರಾಮಸ್ಥರಲ್ಲಿ ಮತ್ತು ನಮಗೆ ಸಂತಸ ಉಂಟುಮಾಡಿದೆ ಎಂದು ಹೇಳಿದರು.