Advertisement

ಚನ್ನಪಟ್ಟಣದಲ್ಲಿ 2 ಲಕ್ಷ ರೂ.ಗಿಂತಅಧಿಕ ಪ್ರಮಾಣದ ದಂಡ ವಸೂಲಿ

04:45 PM Oct 12, 2019 | Team Udayavani |

ಚನ್ನಪಟ್ಟಣ: ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಇಲ್ಲಿನ ನಗರಸಭೆ ಕ್ರಮ ಕೈಗೊಳ್ಳುತ್ತಿದ್ದರೂ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

Advertisement

2016ರಿಂದಲೂ ನಿರಂತರವಾಗಿ ನಿಷೇಧಿತ ಪ್ಲಾಸ್ಟಿಕ್‌ ಗಳನ್ನು ವಶಪಡಿಸಿಕೊಳ್ಳುವುದು, ದಂಡ ವಿಧಿಸುವುದು, ವ್ಯಾಪಾರಿಗಳಿಗೆ ಮಾರಾಟ ಮಾಡದಂತೆ, ಗ್ರಾಹಕರಿಗೆ ಬಳಸದಂತೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಆದರೆ, ಪರಿಣಾಮಕಾರಿಯಾಗಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಇದುವರೆಗೆ ಪಟ್ಟಣದಲ್ಲಿ ಸುಮಾರು 5-6 ಟನ್‌ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೆಲ್ಲವನ್ನೂ ಮತ್ತೆ ಬಳಕೆ ಮಾಡಲು ಆಗದಂತೆ ಕತ್ತರಿಸಿ, ಸಿಮೆಂಟ್‌ ತಯಾರಿಕಾ ಕಾರ್ಖಾನೆಗೆ ರವಾನಿಸಲಾಗಿದೆ. ಅಧಿಕಾರಿಗಳು ಪ್ಲಾಸ್ಟಿಕ್‌ ದಾಳಿ ನಡೆಸಿದಾಗ ಸಂಗ್ರಹಿಸಿದ ಮೊತ್ತವೇ 2 ಲಕ್ಷ ರೂ.ಗಿಂತ ಅಧಿಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಥಾ, ಬೀದಿನಾಟಕ: ಪ್ಲಾಸ್ಟಿಕ್‌ ಬಳಕೆ ದುಷ್ಟಪರಿಣಾಮ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಿತ್ತಿಫಲಕಗಳ ಪ್ರದರ್ಶನ, ರಸ್ತೆಗಳಲ್ಲಿ ಮೆರವಣಿಗೆ, ಜಾಥಾ, ಕಾರ್ಯಕ್ರಮವನ್ನೂ ಮಾಡಲಾಗಿದೆ. ಜತೆಗೆ ಎನ್‌ಜಿಒಗಳ ಮೂಲಕ ಬೀದಿನಾಟಕ, ಅಣಕು ಶವಯಾತ್ರೆ ಪ್ರದರ್ಶನ, ಪೌರಕಾರ್ಮಿಕರಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ.

ಆಟೋ ಪ್ರಚಾರದ ಮೂಲಕ ಕಡ್ಡಾಯ ಬಟ್ಟೆ ಬ್ಯಾಗ್‌ ಬಳಕೆಗೆ ತಿಳಿಸಲಾಗಿದೆ. ಪಟ್ಟಣಾದ್ಯಂತ ನಿತ್ಯ ಜಾಗೃತಿ ಮೂಡಿಸುತ್ತಿರುವುದರಿಂದ ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ, ಗ್ರಾಮೀಣ ಮಂದಿ ಬಟ್ಟೆಯ ಬ್ಯಾಗ್‌ ಬಳಕೆ ಮಾಡುತ್ತಿಲ್ಲವೆಂದು ಅಧಿಕಾರಿಗಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next