Advertisement

ಉತ್ಪಾದನೆ ಪ್ರೋತ್ಸಾಹಕ್ಕೆ 2 ಲಕ್ಷ ಕೋಟಿ

12:40 AM Nov 12, 2020 | mahesh |

ಹೊಸದಿಲ್ಲಿ: ದೇಶೀಯವಾಗಿ ಉತ್ಪಾದನೆ ಹೆಚ್ಚಳ, ಆಮದು ಪ್ರಮಾಣದಲ್ಲಿ ಕಡಿತ, ಉದ್ಯೋಗ ಸೃಷ್ಟಿ, ಆರ್ಥಿಕ ಚೇತರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಉತ್ಪಾದನ ಸಂಪರ್ಕಿತ ಪ್ರೋತ್ಸಾಹ ಯೋಜನೆಯನ್ನು ಘೋಷಿಸಿದೆ. ಐದು ವರ್ಷಗಳ ಅವಧಿಗೆ 2 ಲಕ್ಷ ಕೋಟಿ ರೂ. ವೆಚ್ಚ ಮಾಡುವ ಗುರಿಯೊಂದಿಗೆ ಈ ಯೋಜನೆ ಪ್ರಕಟಿಸಲಾಗಿದೆ.

Advertisement

ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಮುಖ 10 ಆದ್ಯತಾ ವಲಯಗಳನ್ನು ಆರಿಸಿಕೊಂಡು ಇವುಗಳಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. ಉತ್ಪಾದನ ಸಂಪರ್ಕಿತ ಪ್ರೋತ್ಸಾಹ ಯೋಜನೆಯ ಪ್ರಮುಖ ಉದ್ದೇಶವೇ ಕೈಗಾರಿಕೆಗಳಲ್ಲಿ ಉತ್ಪಾದನೆ ಹೆಚ್ಚಿಸುವುದಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕ‌ರ್‌ ಹೇಳಿದ್ದಾರೆ.

ಇದು ಪಂಚವಾರ್ಷಿಕ ಯೋಜನೆಯಾಗಿದ್ದು, ಜಾಗತಿಕವಾಗಿ ಭಾರತೀಯ ಉದ್ದಿಮೆಗಳು ಸ್ಪರ್ಧೆ ನೀಡಲಿ ಎಂಬ ಉದ್ದೇಶದಿಂದ ರೂಪಿಸಲಾಗಿದೆ ಎಂದರು. ಇಡೀ ಯೋಜನೆಯ ಬಗ್ಗೆ ವಿವರ ಕೊಟ್ಟ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಆತ್ಮ ನಿರ್ಭರ ಭಾರತದ ಉದ್ದೇಶವನ್ನು ಸಫ‌ಲಗೊಳಿಸಲು ಇದನ್ನು ರೂಪಿಸಲಾಗಿದೆ ಎಂದರು. ಇದೇ ಸಭೆಯಲ್ಲಿ ನೌಕಾಯಾನ ಸಚಿವಾಲಯವನ್ನು ಬಂದರು, ನೌಕಾಯಾನ ಮತ್ತು ಜಲಸಾರಿಗೆ ಖಾತೆ ಎಂದು ಪುನರ್‌ ನಾಮಕರಣ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next